Ad imageAd image

ಸೆರಗ ಸರ್ಸೆ’ ಹಾಡಿನ ವಿವಾದ : ನೋರಾ ಫತೇಹಿ, ಸಂಜಯ್ ದತ್ ಗೆ ಮತ್ತೊಮ್ಮೆ ನೋಟಿಸ್ 

Bharath Vaibhav
ಸೆರಗ ಸರ್ಸೆ’ ಹಾಡಿನ ವಿವಾದ : ನೋರಾ ಫತೇಹಿ, ಸಂಜಯ್ ದತ್ ಗೆ ಮತ್ತೊಮ್ಮೆ ನೋಟಿಸ್ 
WhatsApp Group Join Now
Telegram Group Join Now

ಬೆಂಗಳೂರು : ನಟ ನಿರ್ದೇಶಕ ಜೋಗಿ ಪ್ರೇಮ್ ನಿರ್ಮಾಣದ ಕೆಡಿ ಚಿತ್ರದ ಸೆರಗ ಸರ್ಸೆ’ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದ ಉಂಟಾಗಿದ್ದು, ಈ ವಿಷಯ ಲೋಕಸಭೆಯಲ್ಲಿ ಸಹ ಚರ್ಚೆ ಆಗಿತ್ತು.

ಹಾಡು ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನಿರ್ದೇಶಕ ಮತ್ತು ಹಾಡಿನ ಮೂಲ ಸಾಹಿತ್ಯ ಬರೆದಿರುವ ಪ್ರೇಮ್, ಹಾಡಿನಲ್ಲಿ ನಟಿಸಿರುವ ನೋರಾ ಫತೇಹಿ, ಸಂಜಯ್ ದತ್ ಹಾಗೂ ಹಾಡಿನ ಹಿಂದಿ ಸಾಹಿತ್ಯ ಬರೆದಿರುವ ರಖೀಬ್ ಆಲಂ ನೊಟೀಸ್ ಜಾರಿ ಮಾಡಿತ್ತು.

ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ ಇದೀಗ ಮತ್ತೊಮ್ಮೆ ನೊಟೀಸ್ ನೀಡಿದೆ.ಈ ಹಿಂದೆ ನೀಡಿದ್ದ ನೋಟೀಸಿನ ಅನ್ವಯ ನೋರಾ ಫತೇಹಿ ಏಪ್ರಿಲ್ 6 ರಂದು ವಿಚಾರಣೆಗೆ ಹಾಜರಾಗಬೇಕಿತ್ತು.

ಆದರೆ ನೋರಾ ಪರವಾಗಿ ಅವರ ವಕೀಲರು ಹಾಜರಾಗಿದ್ದರು, ಇದನ್ನು ಒಪ್ಪದ ಮಹಿಳಾ ಆಯೋಗ ಖುದ್ದಾಗಿ ನಟಿಯೇ ಹಾಜರಾಗೇಕು ಎಂದಿದೆ. ಇದೀಗ ಮತ್ತೊಮ್ಮೆ ನೋರಾ ಫತೇಹಿಗೆ ನೊಟೀಸ್ ಹೊರಡಿಸಿದ್ದು, ಏಪ್ರಿಲ್ 27 ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್, ನಿರ್ಮಾಪಕ ಕೆವಿಎನ್ ವೆಂಕಟೇಶ್ ಹಾಗೂ ಹಿಂದಿ ಆವೃತ್ತಿ ಬರೆದಿರುವ ರಖೀಬ್ ಆಲಂ ಅವರಿಗೂ ಸಹ ರಾಷ್ಟ್ರೀಯ ಮಹಿಳಾ ಆಯೋಗ ನೊಟೀಸ್ ನೀಡಿತ್ತು.

ಈ ಬಗ್ಗೆ ಲಿಖಿತ ಕ್ಷಮಾಪಣೆ ಸಲ್ಲಿಸಿರುವ ಇವರುಗಳು ಮೂರು ತಿಂಗಳು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿಯೂ ಹೇಳಿದ್ದಾರೆ. ನಿರ್ದೇಶಕ ಪ್ರೇಮ್ ಈ ಬಗ್ಗೆ ವಿಡಿಯೋ ಮೂಲಕವು ಕ್ಷಮೆ ಕೇಳಿದ್ದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!