ಕಾಗವಾಡ: ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿ ಸರಣಿಗಳ್ಳತನ ನಡೆದಿದ್ದು, ಮನೆಯೊಂದರ ಬೀಗ ಮುರಿದು 8 ತೊಲೆ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ನಡೆದಿದೆ.

ಅದಲ್ಲದೆ ಒಂದು ಔಷಧ ಅಂಗಡಿಯಲ್ಲಿ 500 ರೂ.ಕಳವು ಮಾಡಲಾಗಿದ್ದು, ಇನ್ನೂ 3 ಮನೆಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ.
ಮಾರುಕಟ್ಟೆ ಆವರಣದಲ್ಲಿರುವ ಸವಿತಾ ಮಾಲಗತ್ತೆ ಎಂಬುವರು ಮನೆಗೆ ಬೀಗ ಹಾಕಿ ನೆಂಟರ ಮನೆಗೆ ಹೋಗಿದ್ದರು. ಮರುದಿನ ಬಂದಾಗ ಮನೆಯ ಬೀಗ ಮುರಿದಿದ್ದು ಬೆಳಕಿಗೆ ಬಂದಿದೆ. 8 ತೊಲೆ ಚಿನ್ನಾಭರಣ ಹಾಗೂ ನಗದು ಸೇರಿ 9 ಲಕ್ಷ ಮೌಲ್ಯದ ಸಾಮಗ್ರಿ ಕಳ್ಳತನ ಮಾಡಲಾಗಿದೆ.

ನಾಲ್ಕು ಮನೆಗಳಲ್ಲಿ ಮನೆ ಮಾಲೀಕರು ಇಲ್ಲದ ಸಮಯ ನೋಡಿಕೊಂಡು ಬೀಗ ಮುರಿದು ಮನೆಗಳಲ್ಲಿನ ಟ್ರೆಜರಿ ಮುರಿದು ಅವುಗಳಲ್ಲಿರುವ ಚಿನ್ನಾಭರಣ ಮತ್ತು ಹಣ ದೋಚುವ ಪ್ರಯತ್ನ ಮಾಡಿದ್ದಾರೆ.
ಕಳ್ಳರ ಬೀಗ ಮುರಿಯುವ ವೇಳೆ ಶಬ್ದ ಕೇಳಿದ ಜನರು ಎದ್ದು ನೋಡಿದಾಗ ನಾಲ್ಕು ಜನರ ಗುಂಪೊದು ಮುಖಕ್ಕೆ ಮಾಸ್ಕ ಹಾಕಿಕೊಂಡು ಕೈಯಲ್ಲಿ ಕಲ್ಲು ಹಿಡಿದು ನಿಂತಿದ್ದನ್ನ ನೋಡಿದ್ದೇವೆ ಎಂದು ಹೇಳಿದರು
ಬೆಳಗಾವಿಯ ಶ್ವಾನದಳ ಹಾಗೂ ಬೆರಳೆಚ್ಚುವ ತಜ್ಞರು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವರದಿ: ಚಂದ್ರಕಾಂತ್ ಕಾಂಬಳೆ




