ನಿಡಗುಂದಿ: ಗುಜರಾತ್‌ದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿಯೊಂದರ ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ ಸಂಭವಿಸಿದ್ದು ಬಿಎಸ್‌ಎಫ್ ಯೋಧನೊಬ್ಬ ಹುತಾತ್ಮನಾಗಿರುವ ಘಟನೆ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಬುಧವಾರ ಜರುಗಿದೆ.
ಅಪಘಾತದಲ್ಲಿ ಬಿಎಸ್‌ಎಫ್ ಯೋಧ ಮುದ್ದೇಬಿಹಾಳ ತಾಲ್ಲೂಕು ಕಾಳಗಿ ತಾಂಡಾದ ನಿವಾಸಿ ಮೌನೇಶ ಖೂಬಪ್ಪ ರಾಠೋಡ(35) ಹುತಾತ್ಮರಾಗಿದ್ದಾರೆ.ಕಾಳಗಿ ತಾಂಡಾದಿಂದ ನಿಡಗುಂದಿ ಮಾರ್ಗದ ಮೂಲಕ ಬಾಗಲಕೋಟ ಜಿಲ್ಲೆಯ ಆಲೂರ ತಾಂಡಾಗೆ ಪತ್ನಿ ನಿರ್ಮಲಾ ಅವರನ್ನು ಭೇಟಿಯಾಗಿ ಮರಳಿ ಸೇನೆಗೆ ವಾಪಸ್ ಆಗುವವರಿದ್ದರು.ನಿಡಗುಂದಿ ಬಸ್ ನಿಲ್ದಾಣದ ಮುಂದೆ ಲಾರಿಯನ್ನು ಬೈಕ್‌ಗೆ ಹಾಯಿಸಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಇನ್ನುಳಿದಂತೆ ತಾಳಿಕೋಟೆ ವಾಸ್ಕೋ ಬಸ್‌ಗೂ ಲಾರಿ ಡಿಕ್ಕಿ ಹೊಡೆದಿದ್ದು ಬಸ್‌ನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ.ಉತ್ತರಪ್ರದೇಶದ ಮೂಲದ ಅಂಬ್ಯುಲೆನ್ಸ್ ಚಾಲಕನ ಭಾಗದಲ್ಲೇ ನಜ್ಜುಗುಜ್ಜಾಗಿದೆ.
ಅಂಬ್ಯುಲೆನ ಚಾಲಕ ರಿತೀಶಕುಮಾರ ಕೋಡಾ ಸಾವನ್ನಪ್ಪಿದ್ದಾನೆ.
ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿದ್ದು ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಅಲಿ ಮಕಾನದಾರ