ಪಾವಗಡ: ಪಟ್ಟಣದ ಕಾವಲಗೆರೆ ಸಮೀಪದ ಹಳೆಯ ನೀರಿನ ಟ್ಯಾಂಕ್ ಡೆಮಾಲಿಶ್ ಮಾಡುವ ವೇಳೆ ಭಾರೀ ಅಪಘಾತ ಸಂಭವಿಸಿ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ 3 ಗಂಟೆಯಲ್ಲಿ ನಡೆದಿದೆ.
ಸುಮಾರು ಎಪ್ಪತ್ತು ವರ್ಷ ಹಳೆಯದಾದ ಟ್ಯಾಂಕ್ ನ್ನು ಶೀತಲಗೊಳಿಸುವ ಕಾರ್ಯ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಮೇಲ್ಭಾಗ ಕುಸಿದು ಮೂವರು ಕಾರ್ಮಿಕರು ಟ್ಯಾಂಕ್ ಒಳಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳು ಶರೀಫ್, ಶಾಹಿದ್ ಮತ್ತು ಉಜಾಮ ಎಂದು ಗುರುತಿಸಲಾಗಿದ್ದು, ಇವರಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ರವಾನಿಸಲಾಗಿದೆ.

ಅಪಘಾತದ ನಂತರ ಎತ್ತರದ ಟ್ಯಾಂಕ್ ನಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಶ್ರಮಿಸಿ, ಅಗ್ಗ ಸೇರಿದಂತೆ ಹಲವು ಪರಿಕರಗಳ ಸಹಾಯದಿಂದ ಅವರನ್ನು ಕೆಳಕ್ಕಿಳಿಸಿದರು.
ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಟ್ಯಾಂಕ್ ಶೀತಲಗೊಳಿಸುವ ಕೆಲಸ ನಡೆದಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಪುರಸಭೆ ಅಧ್ಯಕ್ಷ ಸುದೇಶ್ ಬಾಬು, ಮುಖ್ಯಾಧಿಕಾರಿ ಜಾಫರ್ ಷರೀಫ್, ಮುಖ್ಯ ಆಡಳಿತಾಧಿಕಾರಿ ಭಾಗ್ಯಮ್ಮ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಅಖಂಡೇಶ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲಿಸಿದರು
ವರದಿ:ಶಿವಾನಂದ




