ಸಿರುಗುಪ್ಪ : -ನಗರದ ಎಸ್.ಇ.ಎಸ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆದ ಕ್ರೀಡೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿರುವ ವಿದ್ಯಾರ್ಥಿನಿಯನ್ನು ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಲೆಯ ಮುಖ್ಯೋಪಾದ್ಯಾಯಿನಿ ಲಿಲ್ಲಿ ಥಾಮಸ್ ಅವರು ಮಾತನಾಡಿ ನಮ್ಮ ಶಾಲೆಯ ಸಹ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರ ಪರಿಶ್ರಮದಿಂದಾಗಿ 7ನೇ ತರಗತಿ ವಿದ್ಯಾರ್ಥಿನಿ ಮೈತ್ರಿ.ಜಿ. ಚದುರಂಗ ಆಟವನ್ನು ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ.
ಮುಂದಿನ ರಾಜ್ಯ ಮಟ್ಟದ ಕ್ರೀಡೆಯಲ್ಲೂ ಉತ್ತಮ ಸಾಧನೆಗೈದು ರಾಷ್ಟ್ರ ಮಟ್ಟದಲ್ಲೂ ನಮ್ಮ ಶಾಲೆಯ ಗರಿಮೆಯನ್ನು ಹೆಚ್ಚಿಸಲೆಂದು ಅದಕ್ಕಾಗಿ ಪೂರಕ ತರಬೇತಿಯನ್ನು ಹೆಚ್ಚಿನದಾಗಿ ನೀಡುವುದಾಗಿ ತಿಳಿಸಿದರು.
ವಿದ್ಯಾರ್ಥಿನಿ ಮೈತ್ರಿ.ಜಿ, ಮಾತನಾಡಿ ಚದುರಂಗ ಆಟದಲ್ಲಿ ಸ್ಪೂರ್ತಿ ಮುಖ್ಯವಾಗಿದ್ದು ನನ್ನ ಸಾಧನೆಗೆ ಶ್ರಮಿಸಿದ ಎಲ್ಲಾ ಶಿಕ್ಷಕರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆಂದರು.
ದೈಹಿಕ ಶಿಕ್ಷಕ ವೈ.ಡಿ.ವೆಂಕಟೇಶ ಅವರು ಮಾತನಾಡಿ ಹಾಸನದಲ್ಲಿ ರಾಜ್ಯ ಮಟ್ಟದ ಕ್ರೀಡೆಗಳು ಜರುಗಲಿವೆ ಅಲ್ಲಿಯೂ ಉತ್ತಮ ಸಾಧನೆಗೈಯಲೆಂಬುದು ನಮ್ಮೆಲ್ಲರ ಆಶಯವಾಗಿದೆಂದರು.
ಇದೇ ವೇಳೆ ಶಿಕ್ಷಕರಾದ ಸುಬ್ರಹ್ಮಣ್ಯ, ಅನ್ನಪೂರ್ಣ, ಆಶಾ ರಾಣಿ , ಖಾದರ್‌ಭಾಷ, ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ