ಸೇಡಂ: ತಾಲೂಕಿನ ಶಿಲಾರಕೋಟ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಹಾಲುಮತ ಸಮಾಜದ ಓಣಿಯಲ್ಲಿ ಸುಮಾರು 2ವರ್ಷಗಳಿಂದ ನೀರಿನ ಸಮಸ್ಯೆ ಇತ್ತು ಸಮಸ್ಯೆಯನ್ನು ಗಮನಕ್ಕೆ ತಗೊಂಡಿರುವ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು ಹಾಗೂ ಅಧಿಕಾರಿಗಳು ಬೋರವೆಲ್ ಹಾಕಿಸಿ ಸಮಸ್ಯೆಗೆ ಕಡಿವಾಣ ಹಾಕಿದ್ದಾರೆ. ಸುಮಾರು 300 ಅಡಿ ಪೈಪ್ ಗಳನ್ನು ಇಳಿಸಿ ಬೋರ್ ವೆಲ್ ಹಾಕಲಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಭೀಮರೆಡ್ಡಿ ದೇವಾಡಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಭೀಮರೆಡ್ಡಿ ದೇವಾಡಿ, ಕಾಂಗ್ರೆಸ್ ಮುಖಂಡರಾದ ಮಹಿಪಾಲ್ ರೆಡ್ಡಿ ಅಕುದೋಟ, ಬಾಲಪ್ಪ ತಲಾರಿ, ಬಸಪ್ಪ ಸಜ್ಜನ್, ರಾಜು ಕುರುಬ, ಪಂಪ್ ಆಪರೇಟರ್ ರಮೇಶ್ ಖಂಡ್ರೆಪಲ್ಲಿ ಸೇರಿದಂತೆ ಗ್ರಾಮಸ್ಥರು ಭಾಗಿಯಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




