——————ಹಟ್ಟಿ ಚಿನ್ನದ ಗಣಿ ಕ್ರೀಡಾ ಸಂಸ್ಥೆಯ ಗೌರವ ಕಾರ್ಯದರ್ಶಿ ಸ್ಥಾನದ ಚುನಾವಣೆ
ಲಿಂಗಸ್ಗೂರು: ಹಟ್ಟಿ ಚಿನ್ನದ ಗಣಿಯ ಕ್ರೀಡಾ ಸಂಸ್ಥೆಯ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು ಇಂದು ಏಳು ಜನ ಅಭ್ಯರ್ಥಿಗಳು ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಇಂದು ಹಟ್ಟಿ ಚಿನ್ನದ ಗಣಿ ಕಂಪನಿ ಕ್ರೀಡಾ ಸಂಸ್ಥೆ ಚುನಾವಣಾ ಅಧಿಕಾರಿಗಳಾದ ಸುರೇಶ್ ಆರ್ ಸಿ, ಉಪ ವ್ಯವಸ್ಥಾಪಕರು (ಮಾ.ಸ ) ಇವರಿಗೆ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಒಟ್ಟು ಏಳು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಪ್ರಶಾಂತ, ಬಿ ಆರ್ ನಂಬರ್ 8147, ವೆಲೂಮುರಗನ್, ಬಿ ಆರ್ ನಂಬರ್ 7866, ಶಿವಚಂದ್ರನ್,ಬಿ ಆರ್ ನಂಬರ್ 8609, ನವಿನ ಕುಮಾರ, ಬಿ ಆರ್ ನಂಬರ್ 361, ಚಂದ್ರಕಾಂತ, ಬಿ ಆರ್ ನಂಬರ್ 8339, ಯಂಕೋಬ, ಬಿ ಆರ್ ನಂಬರ್ 5496, ಜಿಲಾನಿಪಾಷಾ,ಬಿ ಆರ್ ನಂಬರ್ 6136. ಹಟ್ಟಿ ಚಿನ್ನದ ಗಣಿ ಕಂಪನಿಯ ಕ್ರೀಡಾ ಸಂಸ್ಥೆಯ ಗೌರವ ಕಾರ್ಯದರ್ಶಿ ಸ್ಥಾನಕ್ಕೆ 19 ಅಕ್ಟೋಬರ್ 2025 ರವಿವಾರ, ರಂದು ನಡೆಯುವ ಚುನಾವಣೆಗೆ ಒಟ್ಟು ಮತಗಳು 3517 ಅಧಿಕಾರಿಗಳು ಸೇರಿ ಹಟ್ಟಿ ಚಿನ್ನದ ಗಣಿ ಕಂಪನಿಯ ಕ್ರೀಡಾ ಸಂಸ್ಥಯ ಗೌರವ ಕಾರ್ಯದರ್ಶಿಯ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ.
ಚುನಾವಣೆ ನಡೆಯುವ ದಿನಾಂಕ 19 ಅಕ್ಟೋಬರ್ 2025 ಬೆಳಗ್ಗೆ 9:30 ಯಿಂದ ಸಂಜೆ 4.30 ರವರೆಗೆ ಮತದಾನ ಸಂಜೆ 5:30 ರಿಂದ ಮತ ಎಣಿಕೆ ಪ್ರಾರಂಭಗೊಳ್ಳುವುದು ಎಂದು ಹಟ್ಟಿ ಚಿನ್ನದ ಕಂಪನಿಯ ಕ್ರೀಡಾ ಸಂಸ್ಥೆಯ ಚುನಾವಣೆ ಅಧಿಕಾರಿಗಳು ಸುರೇಶ್ ಆರ್ ಸಿ ತಿಳಿಸಿದರು.




