ಬೆಂಗಳೂರು: ಕರ್ನಾಟಕದಲ್ಲಿ ಶಾಲಾ ಮಕ್ಕಳಿದೆ ಪ್ರಸಕ್ತ ವರ್ಷದಿಂದಲೇ ಲೈಂಗಿಕ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಶಾಲಾ ಮಕ್ಕಳಿಗೆ ನೈತಿಕ ಪಠ್ಯದಡಿ ಲೈಂಗಿಕ ಶಿಕ್ಷಣ ಪರಿಚಯಿಸಲು ಸರ್ಕಾರ ಮುಂದಾಗಿದೆ.ಮಕ್ಕಳ ತರಗತಿ ಹಾಗೂ ವೈಯೋಮಾನಕ್ಕೆ ತಕ್ಕಂತೆ ಡಿಎಸ್‌ಇಆರ್‌ಟಿ ಯಿಂದ ಲೈಂಗಿಕ ಶಿಕ್ಷಣ ಪಠ್ಯ ಸಿದ್ಧಪಡಿಸಲು ಮುಂದಾಗಿದ್ದು, ಪ್ರಾರಂಭಿಕ ಹಂತದಲ್ಲಿ 8 ರಿಂದ 12 ನೇ ತರಗತಿಯ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಲು ಸರ್ಕಾರ ಯೋಜಿಸಿತ್ತು.
ಯಾವ ವಯೋಮಿತಿಗೆ ಏನೆಲ್ಲಾ ನೈತಿಕ ಪಠ್ಯದ ಅವಶ್ಯಕತೆಯಿದೆ, ವಾರಕ್ಕೆ ಎಷ್ಟು ತರಗತಿಗಳು ಬೇಕು ಎಂದು ಡಿಎಸ್‌ಇಆರ್‌ಟಿ ಪ್ರತ್ಯೇಕ ಪಠ್ಯ ನೀಡಲು ಮುಂದಾಗಿದ್ದು, ಇದೇ ವರ್ಷದಿಂದ ಲೈಂಗಿಕ ಶಿಕ್ಷಣ ಪ್ರಾರಂಭವಾಗಲಿದೆ.
ಆದರೆ ಶಾಲೆಯಲ್ಲಿ ನೈತಿಕ ಶಿಕ್ಷಣದ ಅಡಿಯಲ್ಲಿ ಲೈಂಗಿಕ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಮುಂದಾಗಿರುವುದಕ್ಕೆ ಹಿಂದೂಪರ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದೆ.




