ಹುಮನಾಬಾದ :-ತಾಲೂಕಿನ ಹಳ್ಳಿಖೇಡ (ಬಿ) ಎಸ್.ಜಿ ಹಿಬಾರೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಆನಂದ ಬಾಬು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 98.56%ಪ್ರತೀಶತ ಅಂಕ ಪಡೆದು ಹುಮನಾಬಾದ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡು ತಮ್ಮ ಹಿಬಾರೆ ಶಾಲೆಯ ಕೀರ್ತಿ ಹೆಚ್ಚಿಸುವಲ್ಲಿ ಯಶಸ್ವೀಯಾಗಿದ್ದಾಳೆ.
ಇದರಿಂದ ಬುಧವಾರ ಎಸ್. ಜಿ ಹಿಬಾರೆ ಶಾಲೆ ವತಿಯಿಂದ ವಿದ್ಯಾರ್ಥಿ ವೈಷ್ಣವಿ ಸೇರಿ ತಮ್ಮ ಶಾಲೆಯ ಟಾಪರಸ್ ಗಳಿಗೆ ಬುಧವಾರ ಸನ್ಮಾನ ಹಾಗು ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಪ್ರಾರಂಭಿಸಲಾಯಿತು.
ಬಳಿಕ ಶಾಲೆಯ ಟಾಪರ್ ಗಳಿಗೆ ಮತ್ತು ಅವರ ಜೊತೆಗೆ ಪಾಲಕ ಪೋಷಕರಿಗೆ ಹಾಗು ವಿದ್ಯಾರ್ಥಿಗಳಿಗೆ ಪಾಠ ಭೋದಿಸಿದ ಭೋಧಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಮಾಧ್ಯಮ ಜೊತೆಗೆ ಮಾತಾಡಿ ತಮ್ಮ ಫಾಲಿತಾಂಶ ಹಾಗು ಎಸ್ ಜಿ ಹಿಬಾರೆ ಶಾಲೆ ಆಡಳಿತ ಬಗ್ಗೆ ತಮ್ಮ ಮನದಾಳದ ಮಾತನಾಡಿದರು.
ಎಸ್ ಹಿಬಾರೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಹಿಬಾರೆ ಕೂಡ ಮಾತಾಡಿ,ಫಾಲಿತಾಂಶಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದಗಳು ಅರ್ಪಿಸಿ,ಇನ್ನೂ ಹೆಚ್ಚಿನ ಶಿಕ್ಷಣ ನೀಡುವಲ್ಲಿ ಪ್ರಯತ್ನ ಮಾಡುವುದಾಗಿ ಹೇಳಿದರರು.ಈ ಸಂದರ್ಭದಲ್ಲಿ ಎಸ್ ಜಿ ಹಿಬಾರೆ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ರಚುತ ಹಿಬಾರೆ,ಕೇಶವ ಮಹಾರಾಜ್,ಮಲ್ಲಿಕಾರ್ಜುನ ಪ್ರಭಾ ಸೇರಿದಂತೆ ವಿದ್ಯಾರ್ಥಿಗಳು,ಪಾಲಕರು,ಶಾಲಾ ಸಿಬ್ಬಂದಿಗಳು ಭಾಗಿಯಾಗಿದ್ದರು.
ವರದಿ:-ಸಜೀಶ ಲಂಬುನೋರ್