ಕೂಡ್ಲಿಗಿ : ಸಕರಾದ ಡಾllಶ್ರೀನಿವಾಸ್ ಎನ್ ಟಿ ಹು ದಿನಾಂಕ 28/04/2025 ರಂದು ಹುಡೇಂ ಗ್ರಾಮದಿಂದ ಮುಷ್ಟಲಗುಮ್ಮಿ ವರ ಗೆ ಕಲ್ಯಾಣ ಪಥ ಯೋಜನೆ ಅಡಿಯಲ್ಲಿ ಡಾಂಬರೀಕರಣ ರಸ್ತೆ ( 90 ಲಕ್ಷ ವೆಚ್ಚದಲ್ಲಿ) ಕಾಮಗಾರಿ ಭೂಮಿ ಪೂಜೆ ನೆರವೇರಿತು.
ಈ ರಸ್ತೆ ಮಾಜಿ ಸಚಿವರಾದ ಶ್ರೀಮತಿ ಭಗೀರಥಿ ಮರುಳಸಿದ್ದನಗೌಡರು ಶಾಸಕರಾದ ಸಂದರ್ಭದಲ್ಲಿ ಡಾಂಬರ್ ರಸ್ತೆ ಮಾಡಲಾಗಿತ್ತು ಅದು ಈಗ ತುಂಬಾ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು.
ಇದನ್ನು ಇದನ್ನು ಅರಿತ ಪ್ರಗತಿಪಥ ಯೋಜನೆಯಡಿ ನಮ್ಮ ತಾಲೂಕಿನ ಗಡಿಯವರಿಗೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಉಳಿದ ಕಾಮಗಾರಿಯನ್ನು ಹಿರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರ ಜೊತೆ ಮಾತನಾಡಿ ತ್ವರಿತ ಗತಿಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹುಡೇಂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸದಸ್ಯರು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ