Ad imageAd image

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಗೆ ಮೇ.22 ರಂದು 25 ನೇ ಜನ್ಮ ದಿನ

Bharath Vaibhav
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಗೆ ಮೇ.22 ರಂದು 25 ನೇ ಜನ್ಮ ದಿನ
WhatsApp Group Join Now
Telegram Group Join Now

ನಿರ್ದೇಶಕ ಸಿದ್ಧಾರ್ಥ್ ಆನಂದ್, ಸೋಷಿಯಲ್​ ಮೀಡಿಯಾದಲ್ಲಿ ಬಾಲಿವುಡ್​ ಕಿಂಗ್​​​ ಶಾರುಖ್ ಖಾನ್ ಮತ್ತು ಅವರ ಮಗಳು ಸುಹಾನಾ ಖಾನ್ ನಟನೆಯ ‘ಕಿಂಗ್’ ಚಿತ್ರದ ಘೋಷಣೆ ಬಗ್ಗೆ ಸುಳಿವು ನೀಡುವ ಕ್ರಿಪ್ಟಿಕ್ ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ ಹಿನ್ನೆಲೆ, ಸಾಮಾಜಿಕ ಮಾಧ್ಯಮಗಳು ಊಹಾಪೋಹಗಳಿಂದ ತುಂಬಿವೆ. ಅವರ “ಮೇ 2025!” ಎಂಬ ಪೋಸ್ಟ್​ ಅಭಿಮಾನಿಗಳ ಊಹಾಪೋಹಕ್ಕೆ ವೇದಿಕೆ ಸೃಷ್ಟಿಸಿದೆ.

ಸುಹಾನಾ ಖಾನ್ ಮೇ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ, ಚಿತ್ರದ ಅಧಿಕೃತ ಘೋಷಣೆಯಾಗೋ ಸಾಧ್ಯತೆ ಇದೆ ಎಂದು ಊಹಿಸಲಾಗುತ್ತಿದೆ. ‘ದಿ ಆರ್ಚೀಸ್’ ಮೂಲಕ ನಟನಾ ವೃತ್ತಿಜೀವನ ಆರಂಭಿಸಿರುವ ಕಿಂಗ್​ ಖಾನ್​ ಪುತ್ರಿ ಮೇ 22ರಂದು ತಮ್ಮ 25ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

‘ಕಿಂಗ್’​, ನೆಟ್‌ಫ್ಲಿಕ್ಸ್‌ನಲ್ಲಿ (ಒಟಿಟಿ) ‘ದಿ ಆರ್ಚೀಸ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿರುವ ಸುಹಾನಾ ಖಾನ್ ಅವರ ಬಿಗ್​ ಸ್ಕ್ರೀನ್​ನ ಚೊಚ್ಚಲ ಚಿತ್ರವಾಗಲಿದೆ. ಈ ಸಿನಿಮಾದಲ್ಲಿ ನಟ ಅಭಿಷೇಕ್ ಬಚ್ಚನ್ ಖಳನಾಯಕನಾಗಿ ಮತ್ತು ಮುಂಜ್ಯಾ ನಟ ಅಭಯ್ ವರ್ಮಾ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ವದಂತಿಗಳಿವೆ. ಅದಾಗ್ಯೂ, ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಲಿ ಅಥವಾ ಸ್ವತಃ ಶಾರುಖ್ ಖಾನ್​ ಅವರಾಗಲಿ ಯಾವುದೇ ವಿವರಗಳನ್ನು ಇನ್ನೂ ದೃಢಪಡಿಸಿಲ್ಲ.

ಬಹುನಿರೀಕ್ಷಿತ ಚಿತ್ರದ ನಿರ್ದೇಶಕರು ಏಪ್ರಿಲ್​​ 7ರಂದು “ಸುಳ್ಳು” ಎಂಬ ಒಂದೇ ಒಂದು ಪದವನ್ನು ಟ್ವೀಟ್ ಮಾಡಿದ್ದರು. ಈ ಪೋಸ್ಟ್​​, ಚಿತ್ರದ ತಾರಾಗಣದ ಬಗೆಗಿನ ವದಂತಿ, ವರದಿಗಳಿಗೆ ಕೊಟ್ಟ ಉತ್ತರ. ಈ ಮೂಲಕ ಊಹಾಪೋಹಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ದೀಪಿಕಾ ಪಡುಕೋಣೆ ಅವರನ್ನು ಕಿಂಗ್‌ ಚಿತ್ರದಲ್ಲಿ ಸುಹಾನಾ ಅವರ ತಾಯಿಯಾಗಿ ಆಯ್ಕೆ ಮಾಡಲಾಗಿದೆ ಮತ್ತು ಅವರು ಶಾರುಖ್ ಅವರ ಮಾಜಿ ಪ್ರೇಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹರಡಿತ್ತು. ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ಬಂದವು. ಅದಾಗ್ಯೂ, ಆನಂದ್ ಅವರ ಎಕ್ಸ್ ಪೋಸ್ಟ್ ವದಂತಿಗಳಿಗೆ ಫುಲ್​ ಸ್ಟಾಪ್​ ಇಟ್ಟಿತು.

WhatsApp Group Join Now
Telegram Group Join Now
Share This Article
error: Content is protected !!