Ad imageAd image

ನಗರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ಶಾಹಿದ್ ಅಬ್ಬಾಸ್ ನೇಮಕ.

Bharath Vaibhav
ನಗರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ಶಾಹಿದ್ ಅಬ್ಬಾಸ್ ನೇಮಕ.
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ ನಗರಸಭೆಗೆ ಐದು ಮಂದಿ ಕಾಂಗ್ರೆಸ್ ಮುಖಂಡರು ನಾಮನಿರ್ದೇಶನ ಸದಸ್ಯರಾಗಿ ನೇಮಕವಾಗಿದ್ದು ವಾರ್ಡ್ 1ರ ಶಾಹಿದ್ ಅಬ್ಬಾಸ್ ರವರು ಒಬ್ಬರಾಗಿದ್ದಾರೆ, ಇದೇ ವೇಳೆ ತಮ್ಮ ನೇಮಕ ಸಂಬಂಧ ಪಟ್ಟಾಗಿ ಸುದ್ದಿಗರರೊಂದಿಗೆ ಮಾತನಾಡಿದ ಶಾಹಿದ್ ಅಬ್ಬಾಸ್ ತಮ್ಮ ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವುದು ನೋಡಿ ಕೇಳದೆ ಒಲಿದು ಬಂದ ಹುದ್ದೆ, ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಶ್ರಮಿಸುವುದು ಪಕ್ಷಕ್ಕಾಗಿ ನಮ್ಮ ಶ್ರಮ ಎಲ್ಲವನ್ನೂ ನೋಡಿಯೇ ನನ್ನನ್ನು ನಗರಸಭೆಗೆ ನಾಮ ನಿರ್ದೇಶನ ಸದಸ್ಯನಾಗಿ ನೇಮಕ ಮಾಡಿದ್ದು ಉಸ್ತುವಾರಿಸಚಿವ ಡಾll ಎಂ ಸಿ ಸುಧಾಕರ್ ಹಾಗೂ ಶಾಸಕರಾದ ಪ್ರದೀಪ್ ಈಶ್ವರ್ ರವರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದರು, ಇನ್ನು ನನ್ನನ್ನು ನಗರಸಭೆಗೆ ನಾಮನಿರ್ದೇಶನ ಸದಸ್ಯನಾಗಿ ನೇಮಕ ಮಾಡಿದ್ದು ನನ್ನ ಮೇಲೆ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ ನೀಡಿರುವ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿಷ್ಠೆಯಿಂದ ಪಾಲಿಸುತ್ತೇನೆ, ಪಕ್ಷಕ್ಕಾಗಿ ನಿರಂತರವಾಗಿ ದುಡಿಯುತ್ತ ಬಂದಿದ್ದು ಈಗ ಇನ್ನಷ್ಟು ಹೆಚ್ಚು -ಹೆಚ್ಚು ಕೆಲಸ ಮಾಡಬೇಕಿದೆ ಪಕ್ಷದ ಕೆಲಸ ಕಾರ್ಯಗಳಲ್ಲಿ ನನಗೆ ಸಹಕಾರ ನೀಡಿದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದರು, ಈ ಸಂದರ್ಭದಲ್ಲಿ ವಿನಯ್ ಬಂಗಾರಿ, ಹಮೀಮ್ ಹಾಗೂ ಹಲವಾರು ಕಾಂಗ್ರೆಸ್ ಮುಖಂಡರು ಶಾಹಿದ್ ಅಬ್ಬಾಸ್ ಅಭಿಮಾನಿಗಳ ಬಳಗ ಇದೇ ವೇಳೆ ಆಶೀರ್ವಾದಿಸಿದ ಶುಭ ಕೋರಿದರು.

ವರದಿ :ಯಾರಬ್.ಎಂ.
ಚಿಕ್ಕಬಳ್ಳಾಪುರ ನ್ಯೂಸ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!