Ad imageAd image

ಪಟ್ಟಿ ನಾಗಪ್ಪಾ ಪಕ್ಕದ ಮೈದಾನದಲ್ಲಿ ಶಂಬು ಕಲ್ಲೋಳಿಕರ್ ಭರ್ಜರಿ ಪ್ರಚಾರ.

Bharath Vaibhav
ಪಟ್ಟಿ ನಾಗಪ್ಪಾ ಪಕ್ಕದ ಮೈದಾನದಲ್ಲಿ ಶಂಬು ಕಲ್ಲೋಳಿಕರ್ ಭರ್ಜರಿ ಪ್ರಚಾರ.
WhatsApp Group Join Now
Telegram Group Join Now

ಚಿಕ್ಕೋಡಿ :- ಇವತ್ತು ರವಿವಾರ ಬೆಳಿಗ್ಗೆ 10 ರಿಂದ 3 ಗಂಟೆವರೆಗೆ ಶ್ರೀ ಶಂಬು
ಕಲ್ಲೋಳಿಕರ ಅವರ ನೇತೃತ್ವದಲ್ಲಿ ಬುದ್ಧ ಪುತ್ತಳಿಗೆ ದ್ವೀಪ ಹಚ್ಚುವ ಮೂಲಕ ಬೃಹತ್ ಪ್ರಚಾರದ ಕಾರ್ಯಕ್ರಮ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶ್ ಅಂಬೇಡ್ಕರ್ ಅವರನ್ನು ಸ್ವಾಗತಿಸಿದ ನಂತರ ಚಿಕ್ಕೋಡಿ ಲೋಕಸಭಾ ಸ್ವತಂತ್ರ ಅಭ್ಯರ್ಥಿಯಾದ ಶಂಬು ಕಲ್ಲೋಳಿಕರ್ ಇವರು ಮಾತನಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಎಲ್ಲ ಸುಳ್ಳು ಗ್ಯಾರಂಟಿಗಳನ್ನು ಕೊಟ್ಟು ಜನರಿಗೆ ಮೋಸ ಮಾಡುತ್ತಿದೆ ಎಂದರು.

ಇಂತಹ ಸುಳ್ಳು ಗ್ಯಾರಂಟಿಗಳಿಗೆ ಮೋಸ ಹೋಗಬಾರದು ಆದ್ದರಿಂದ ದಿನಾಂಕ 7 ರಂದು ನಡೆಯಲಿರುವ ಮತದಾನ ಬೂತ್ ಗಳಲ್ಲಿ ತಾವು ಬಂದು ನಿಮ್ಮ ಒಳ್ಳೆಯ ಸೇವೆ ಮಾಡಲು ನನಗೆ ಮತ ಕೊಟ್ಟು ಈ ಅಭ್ಯರ್ಥಿಯನ್ನು ಪ್ರಚಂಡ ಮತಗಳಿಂದ ಆರಿಸಿ ತರಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗನಾದ ಪ್ರಕಾಶ್ ಅಂಬೇಡ್ಕರ್ ಅವರು ಮಾತನಾಡಿ.

ಕಾಂಗ್ರೆಸನವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ ಅವರು ಸದಾ ನಮ್ಮ ಭವಿಷ್ಯದ ಜ್ಯೋತಿಯಾಗಿ ಅವರು ಕೊನೆ ಉಸಿರು ಎಳೆದ ನಂತರ ಅಲ್ಲಿ ಅವರಿಗೆ ಅಂತ್ಯಕ್ರಿಯೆಗೆ ಜಾಗ ಕೊಡಲಿಲ್ಲ ಅವರಿಗೆ ಯಾವುದು ಕೂಡ ರತ್ನ ಪ್ರಶಸ್ತಿಯನ್ನು ಕೊಡಲಿಲ್ಲ ಈಗ ಅವರನ್ನು ನೆನೆಸಿಕೊಳ್ಳುತ್ತಾರೆ ಎಂದರು.

ಬಿಜೆಪಿಯವರು ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು ಅದಕ್ಕಾಗಿ ಈ ಶಂಭು ಕಲ್ಲೋಳಿಕರವರನ್ನು ಆರಿಸಿ ತಂದು ಈ ಕ್ಷೇತ್ರದಲ್ಲಿ ಒಂದು ಇತಿಹಾಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಶಿವಾಜಿ ಮಾನೆ, ಸಂಭಾಜಿ ಪಾಟೀಲ್, ಕಿಸಾನ್ ನಂದಿ, ಸಂಜಯ್ ನಾಯಕ್, ಸರ್ಜೆರಾವ್ ಹೆಗಡೆ, ಪ್ರಕಾಶ್ ನಾಯಕ್, ನಾರಾಯಣ ಚೌಹಾನ್, ಉತ್ತಮ ಮಡೆಕರ್, ಸೀತಲ್ ಕಾಂಬಳೆ, ನಾಮದೇವ ಸಾಳುoಕೆ, ತಾನಾಜಿ ಪಾಟೀಲ್, ಬಾಬಾಸಾಹೇಬ್ ಪಾಟೀಲ್, ಇನ್ನು ಇತರ ಎಲ್ಲ ಕಾರ್ಯಕರ್ತರು ಹಾಗೂ ಸಾವಿರಾರು ಜನರ ಪ್ರಸ್ತುತಿಯಲ್ಲಿ ಕಾರ್ಯಕ್ರಮ ನಡೆಯಿತು.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!