Ad imageAd image

ಸಂಕೋನಹಟ್ಟಿ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರಾಗಿ ಶಂಕರ ರಾಮು ಗಡದೆ ಆಯ್ಕೆ

Bharath Vaibhav
ಸಂಕೋನಹಟ್ಟಿ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರಾಗಿ ಶಂಕರ ರಾಮು ಗಡದೆ ಆಯ್ಕೆ
WhatsApp Group Join Now
Telegram Group Join Now

ಅಥಣಿ: ರಾಜ್ಯದಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಅಥಣಿ ಗ್ರಾಮೀಣ ಸಂಕೋನಹಟ್ಟಿ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರಾಗಿ ಶಂಕರ ರಾಮು ಗಡದೆ ಆಯ್ಕೆಯಾಗುವ ಮೂಲಕ ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ಗುಂಪಿಗೆ ಜಯ ದೊರಕಿದರೆ ಸಂತೋಷ ಕಕಮರಿ ಪರಾಭವಗೊಳ್ಳುವ ಮೂಲಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಗುಂಪಿಗೆ ತೀವ್ರ ಮುಖಭಂಗವಾಯಿತು.

ಅವಿಶ್ವಾಸ ಗೊತ್ರುವಳಿ ಮಂಡಿಸಿದ ಪರಿಣಾಮ ಖಾಲಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗ ಶಂಕರ ರಾಮು ಗಡದೆ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗ ಸಂತೋಷ ಚೌಡಪ್ಪಾ ಕಕಮರಿ ನಾಮಪತ್ರ ಸಲ್ಲಿಸಿದ್ದ ಪರಿಣಾಮ ನಿಗದಿಯಾದ ಚುನಾವಣೆಯಲ್ಲಿ ಭಾಗವಹಿಸಿದ್ದ 53 ಸದಸ್ಯರಲ್ಲಿ ಜಯ ಸಾಧಿಸಿದ ಶಂಕರ ಗಡದೆ ಇವರಿಗೆ 43 ಹಾಗೂ ಪರಾಭವಗೊಂಡ ಸಂತೋಷ ಕಕಮರಿ ಇವರಿಗೆ 10 ಮತಗಳು ಬಿದ್ದ ಪರಿಣಾಮ ಶಂಕರ ಗಡದೆ 33 ಮತಗಳಿಂದ ಆಯ್ಕೆಯಾದರು.

ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ, ಶಾಸಕ ಸವದಿ-ಅಥಣಿ ಗ್ರಾಮೀಣ ಗ್ರಾಮ ಪಂಚಾಯತ ಅಧ್ಯಕ್ಷರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದೀಪ ದಂತಹ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವೆ ಎಂದು ಶಾಸಕ ಲಕ್ಷ್ಮಣ ಸವದಿ ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿದರು.

ಗ್ರಾಮ ಪ‌ಂಚಾಯತಗೆ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರ ಗಡದೆ 16 ತಿಂಗಳು ಹಿಂದೆ ಕುತಂತ್ರದಿಂದ ಸೋಲನ್ನು ಅನುಭವಿಸಿದ್ದರು ಆದರೆ ಇಂದು ನಡೆದ ಚುನಾವಣೆಯಲ್ಲಿ 33 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದ ಅವರು ಅವರ ಒಳ್ಳೆಯ ಕಾರ್ಯಗಳಿಗೆ ನಾನು ಬೆನ್ನೆಲುಬಾಗಿ ನಿಲ್ಲುವೆ ಎಂದರು.

ಗ್ರಾಮ ಪಂಚಾಯತಿಯ ಬಾಕಿ ಉಳಿದ ಅವಧಿಯಲ್ಲಿ ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸುವ ಮೂಲಕ ಪಂಚಾಯತ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸುವೆ ಎಂದ ಅವರು ಚುನಾವಣೆಯಲ್ಲಿ ನನ್ನ ಪರವಾಗಿ ಮತ ಚಲಾಯಿಸಿದ ಎಲ್ಲ ಸದಸ್ಯರನ್ನು ಅಭಿನಂದಿಸಿದರು.

ಚುನಾವಣಾ ಅಧಿಕಾರಿಯಾಗಿ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಲ್ಲಾಪುರ, ಸಹಾಯಕರಾಗಿ ತಾ.ಪಂ ವ್ಯವಸ್ಥಾಪಕ ಗುರುನಾಥ ಸ್ವಾಮಿ, ನವೀನ. ಹಿರೇಮಠ. ಪಂಚಾಯತ ಅಭಿವೃದ್ಧಿ ಅಧಿಕಾರಿ ಬೀರಪ್ಪ ಕಡಗಂಚಿ ಕಾರ್ಯನಿರ್ವಹಿಸಿದರು.

ವಿಜಯೋತ್ಸವದಲ್ಲಿ ಮುಖಂಡರಾದ ಎಸ್.ಕೆ.ಬುಟಾಳಿ, ಶಿವಾನಂದ ದಿವಾನಮಳ, ಶಿವಾನಂದ ನಾಯಿಕ, ಶ್ರೀಶೈಲ ನಾಯಿಕ, ಗಿರೀಶ ದುವಾನಮಳ, ಶೇಖರ ಕನಕರೆಡ್ಡಿ, ಶಾಂತಿನಾಥ ನಂದೇಶ್ವರ, ಶಿವರುದ್ರ ಘೂಳಪ್ಪನವರ, ಅರುಣ ಭಾಸಿಂಗಿ, ನರಸು ಬಡಕಂಬಿ, ಲಕ್ಷ್ಮಣ ಮುಗುಳಖೋಡ, ಸಂಜಯ ಹಣಮಾಪುರ, ಪಾರೀಸ್ ನಂದೆಪ್ಪನವರ, ಅನಂತ ಬಸರಿಖೋಡಿ, ಅಶೋಕ ಕೌಜಲಗಿ, ಪ್ರಕಾಶ ಶೇಡಬಾಳೆ, ಚನ್ನಬಸು ಹುಲಗಬಾಳಿ, ಸಿಬ್ಬಂದಿ ವರ್ಗ ಇನ್ನಿತರರು ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ: ರಾಜು ವಾಘಮಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!