ಇಳಕಲ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಇಳಕಲ್ ತಾಲೂಕ ಘಟಕಕ್ಕೆ ಅಧ್ಯಕ್ಷರನ್ನಾಗಿ ಶಾಂತಣ್ಣ ಸರಗಣಾಚಾರಿ ಅವರನ್ನು.ಉಪಾಧ್ಯಕ್ಷರನ್ನಾಗಿ ಜಾಕೀರ ಹುಸೇನ್ ತಾಳಿಕೋಟಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಗುರು ಗಾಣಿಗೇರ, ಖಜಾಂಚಿಯಾಗಿ ಕೆ ಎಚ್ ಸೋಲಾಪೂರ,ಗ್ರಾಮೀಣ ಉಪಾಧ್ಯಕ್ಷರಾಗಿ ವಿರೇಶ ಸಿಂಪಿ ಹಾಗೂ ಗ್ರಾಮೀಣ ಕಾರ್ಯದರ್ಶಿಯಾಗಿ ಶಂಕರ ಮಂಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಕಾರ್ಯಕಾರಣಿ ಸದಸ್ಯ ಹಾಗೂ ಚುನಾವಣಾ ಅಧಿಕಾರಿ ಈಶ್ವರ ಶೆಟ್ಟರ ಹಾಗೂ ಜಿಲ್ಲಾ ಕಾ ನಿ ಪ ಅಧ್ಯಕ್ಷ ಮಹೇಶ ಅಂಗಡಿ ಜಂಟಿಯಾಗಿ ಘೋಷಿಸಿದರು. ಕ ಕಾ ನಿ ಪ.ಸದಸ್ಯರೆಲ್ಲರೂ ಸೇರಿ ಅವಿರೋಧವಾಗಿ ಆಯ್ಕೆಮಾಡಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ದರಗಾದ, ಬಸವರಾಜ ಮಠದ, ಮಹಾಂತೇಶ ಗೊರಜನಾಳ,ನಿರ್ಗಮಿತ ಅಧ್ಯಕ್ಷ ವಿನೋದ ಬಾರಿಗಿಡದ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.




