ಕಂಪ್ಲಿ: ವಿಶ್ವದಲ್ಲೇ ಏಕಾತೆಯಲ್ಲಿ ವಿವಿಧತೆಯನ್ನು ಹೊಂದಿರುವ ಭಾರತವಾಗಿದ್ದು ಇಡೀ ದೇಶವೇ ಆಚರಣೆ ಮಾಡುವಂತಹ ಹಬ್ಬಗಣೇಶ ಚತುರ್ಥಿಯಾಗಿದೆ ಎಂದು ತಳಕು ಮತ್ತು ಬಳ್ಳಾರಿ ಎಸ್ಪಿ ಶೋಭಾ ರಾಣಿ ಅವರು ಹೇಳಿದರು.
ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಅಂಗವಾಗಿ ಹಬ್ಬಗಳ ಹಮ್ಮಿಕೊಳ್ಳಲಾಗಿದ್ದ ಶಾಂತಿಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಸಾಮಾಜಿಕ ಸ್ವಾಸ್ತಿಕ್ಕೆ ಧಕ್ಕೆ ಆಗದಂತೆ ಗಣೇಶ ಆಚರಣೆಗೆ ಇಲಾಖೆಯಿಂದ ಸಂಪೂರ್ಣ ಸಹಕಾರ ಇರುತ್ತದೆ ಆದ್ದರಿಂದ ಯಾರು ಸಹ ಡಿ ಜೆ ಗೆ ಅವಕಾಶ ಇರುವುದಿಲ್ಲ ಯಾರೇ ಆಗಲಿ ಡಿಜಿ ಹಾಕಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಗಣೇಶ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧರ್ಮಾತೀತವಾಗಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಡಿಜಿ ಕುಣಿಯುವುದೇ ಗಣೇಶ ಉತ್ಸವ ಅಲ್ಲ, ಕಂಪ್ಲಿ ಪಟ್ಟಣದಲ್ಲಿ ಎಂದಿಗೂ ಕೋಮು ಗಲಭೆ ನಡೆದಿಲ್ಲ. ಇದೊಂದು ಸಾಮರಸ್ಯದ ಕೇಂದ್ರವಾಗಿದೆ. ಪ್ರತಿ ವರ್ಷವೂ ಅದ್ದೂರಿಯಾಗಿ ಆಚರಿಸಬೇಕು.
ಶಾಂತಿ-ಸಂಭ್ರಮದಿಂದ ಸಾರ್ವಜನಿಕ ಪೊಲೀಸ್ ಕಾಯ್ದೆ ಅನ್ವಯ ಸಾರ್ವಜನಿಕರಿಗೆ ತೊಂದರೆ, ಕರ್ಕಶ ಶಬ್ದ ಡಿಜಿ, ಇತರೆ ಉಂಟುಮಾಡುವ ಬಳಕೆಮಾಡಬಾರದು. ಧ್ವನಿವರ್ಧಕಗಳನ್ನು ಬಳಕೆ ಮಾಡಬಾರದು ಗಣೇಶ ಉತ್ಸವ ಸಮಿತಿಯವರು ಗ್ರಾಮ ಪಂಚಾಯತಿ. ಪಟ್ಟಣ ಪಂಚಾಯಿತಿ, ಪುರಸಭೆ ಬೆಸ್ಕಾಂ,ಅಗ್ನಿಶಾಮಕ ಇಲಾಖೆಗಳಿಂದ ಅನುಮತಿ ಪೊಲೀಸ್ ಪಡೆದಿರಬೇಕು ಎಂದರು.
ಡಿವೈಎಸ್ಪಿ ಪ್ರಸಾದ್ ಗೋಕಲೆ ಅವರು ಮಾತನಾಡಿ, ಸ್ನೇಹಿ ಗಣೇಶಮೂರ್ತಿ ಪರಿಸರ ಪ್ರತಿಷ್ಠಾಪಿಸಬೇಕು. ಸರ್ಕಾರದ ಆದೇಶದಂತೆ ಪರಿಸರಕ್ಕೆ ಪೂರಕವಾಗಿರಬೇಕು. ಗಣೇಶ ಹಬ್ಬ ಆಚರಣಾ ಸಮಿತಿ ಸದಸ್ಯರುಗಳ ಪಟ್ಟಿ, ನೀಡಬೇಕು ಗಣೇಶ ಮೂರ್ತಿಗಳನ್ನು
ಜಾಗರೂಕತೆಯಿಂದ ಕಾಪಾಡಬೇಕು ದಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಹಬ್ಬ ಆಚರಣೆಯಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ಪುರಸಭೆ ಹಾಗೂ ಪುರಸಭೆ ಮುಖ್ಯ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿದರು ಪಟ್ಟಣ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬರು ಮಣ್ಣಿನ ಹಾಗೂ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಬೇಕು ಹಾಗೂ ಪಟ್ಟಣ ಪಂಚಾಯತಿಯಿಂದ ಅನುಮತಿ ಪರವನಗೆ ಪಡೆಯುವಂತೆ ಗಣಪತಿ ಮಂಡಳಿಯವರಿಗೆ ಸೂಚನೆ ನೀಡಿದರು
ಈ ಸಂದರ್ಭದಲ್ಲಿ ಡಿ ವೈ ಎಸ್ ಪಿ ಪ್ರಸಾದ್ ಗೋಕಲೆ ಪೊಲೀಸ್ ಇನ್ಸ್ಪೆಕ್ಟರ್ ಕೆಬಿ ವಾಸ್ ಕುಮಾರ್ ಪಿಎಸ್ಐ ಅವಿನಾಶ್ ಎಎಸ್ಐ ಹಾಗೂ ಕಂಪ್ಲಿಯ ನಗರದ ಹಿರಿಯ ಮುಖಂಡರು ಮುಸ್ಲಿಮ್ಸ್ ಮುಖಂಡರು ಹಾಗು ಯುವಕರು ಈ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು.




