Ad imageAd image

ಪುರಸಭೆ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ ಉಪಾಧ್ಯಕ್ಷರಾಗಿ ನಾರಾಯಣಕರ ಅವಿರೋಧ ಆಯ್ಕೆ

Bharath Vaibhav
ಪುರಸಭೆ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ ಉಪಾಧ್ಯಕ್ಷರಾಗಿ ನಾರಾಯಣಕರ ಅವಿರೋಧ ಆಯ್ಕೆ
WhatsApp Group Join Now
Telegram Group Join Now

ಸಿಂದಗಿ: -ಸಾಕಷ್ಟು ಕುತೂಹಲ ಮೂಡಿಸಿದ್ದ ಪುರಸಭೆ ಚುನಾವಣೆಗೆ ಇಂದು ತೆರೆ ಬಿದ್ದಿದೆ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಸೋಮವಾರ ನಡೆಯಿತು ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು ಅಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 18ನೇ ವಾರ್ಡ್ ಜೆಡಿಎಸ್ ಸದಸ್ಯ ರಾಜಣ್ಣ ನಾರಾಯಣಕರ ಮಾತ್ರ ನಾಮಪತ್ರ ಸಲ್ಲಿಸಿದ್ದರು ಹೀಗಾಗಿ ಅವಿರೋಧ ಆಯ್ಕೆ ಮಾಡಲಾಯಿತು

ಒಟ್ಟು 23 ಸದಸ್ಯರಿದ್ದು 18 ಸದಸ್ಯರು ಹಾಜರಿದ್ದರು ಹೀಗಾಗಿ 1/3 ಆಧಾರದ ಮೇಲೆ ಚುನಾವಣೆ ಪ್ರಕ್ರಿಯೆ ನಡೆಯಿತು ಐವರು ಸದಸ್ಯರು ಗೈರಾಗಿದ್ದರು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸದಸ್ಯರೊಂದಿಗೆ ಪುರಸಭೆ ಮುಂಭಾಗದಲ್ಲಿ ಸಂಭ್ರಮಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಸೇರಿದಂತೆ ಅನೇಕರಿದ್ದರು ನೂತನ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮಾತನಾಡಿ ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಪಟ್ಟಣದ ಅಭಿವೃದ್ಧಿ ಕಾರ್ಯಕ್ಕೆ ಸದಾ ಸಿದ್ಧ ಎಂದರು.

ಈ ವೇಳೆ ನೂತನ ಅಧ್ಯಕ್ಷ ಶಾಂತವೀರ ಬಿರಾದಾರ ಮಾತನಾಡಿ ಅಧ್ಯಕ್ಷನಾಗಬೇಕು ಎಂಬುದು ಬಹಳ ದಿನಗಳ ಕನಸಾಗಿತ್ತು ಶಾಸಕರು ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷನಾಗಿದ್ದೇನೆ ಸರ್ಕಾರದೊಂದಿಗೆ ಒಡನಾಟ ಇರುವುದರಿಂದ ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ ಶಾಸಕರ ಸಹಕಾರ ಇರುತ್ತೆ ಎಲ್ಲ ಸದಸ್ಯರು ಸಹಕಾರ ಕೊಡಬೇಕು ಎಲ್ಲ ವಾರ್ಡ್ ಅಭಿವೃದ್ಧಿ ಮಾಡುತ್ತೇನೆ.

ಇದೇ ಸಂದರ್ಭದಲ್ಲಿ ಸದಸ್ಯರಾದ ಪ್ರತಿಭಾ ಕಲ್ಲೂರ ಉಮಾದೇವಿ ಸುಲ್ಪಿ ಕಲಾವತಿ ಕಡಕೋಳ ಬಸವರಾಜ ಯರನಾಳ ಹಣಮಂತ ಸುಣಗಾರ ಬಾಷಾಸಾಬ್ ತಾಂಬೋಳಿ ಖೈರುನಬಿ ನಾಟೀಕಾರ ಹಾಸೀಮಪೀರ ಆಳಂದ ಪಾರ್ವತಿ ದುರ್ಗಿ ಮಹಾಂತೇಶ ಬಿರಾದಾರ ಶಾಂತವೀರ ಮನಗೂಳಿ ಭೀಮಣ್ಣ ಕಲಾಲ ತಹಸೀನ ಮುಲ್ಲಾ ಗೊಲ್ಲಾಳಪ್ಪ ಬಂಕಲಗಿ ಶರಣಗೌಡ ಪಾಟೀಲ ಮಹಾದೇವಿ ನಾಯ್ಕೋಡಿ ಹಾಜರಿದ್ದರು
ಶ್ರೀಶೈಲ ಬೀರಗೊಂಡ ವಿಜಯಲಕ್ಷ್ಮಿ ನಾಗೂರ ಭಾಗವ್ವ ಡೋಣೂರ ಸಂದೀಪ ಚೌರ ಹಾಗೂ ಬಸಮ್ಮ ಸಜ್ಜನ ಗೈರುಹಾಜರಾಗಿದ್ದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!