ರೋಣ: ಆಪರೇಷನ್ ಸಿಂಧೂರ ವಿಜೇತ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ರಾಗಿ ಸತತ 22 ವರ್ಷಗಳ ಕಾಲ ಭಾರತ ದೇಶಕ್ಕಾಗಿ ತನ್ನ ಸೇವೆಯನ್ನು ಹಗಲಿರುಳು ಎನ್ನದೆ ಭಾರತ ದೇಶ ಸೇವೆ ಮಾಡಿ ರಾಷ್ಟ್ರೀಯ ಗಡಿಗಳನ್ನು ಕಾಪಾಡುತ್ತಾ ಶತ್ರುಗಳ ದಾಳಿಯಿಂದ ದೇಶದಲ್ಲಿ ವಾಸಿಸುವ ನಮ್ಮನ್ನು ರಕ್ಷಿಸಲು ಶರಣಪ್ಪ ನೇಮತಿ ಇವರ ತ್ಯಾಗ ಅಪಾರವಾಗಿದೆ.

ದೇಶದ ಕಾಯುವ ಸೈನಿಕರು ಮತ್ತು ರೈತರು ಇರದಿದ್ದರೆ ಭಾರತದ ಪ್ರಜೆಗಳಾದ ನಾವು ಬದುಕಲು ಅಸಾಧ್ಯವಾಗುತ್ತಿತ್ತು, ಇಂತಹ ಸೈನಿಕರು ಮತ್ತು ರೈತರ ತ್ಯಾಗ ಮೆಚ್ಚುವಂತಾಗಿದೆ. ಈಗ ನಿವೃತ್ತಿ ಹೊಂದಿ ನಮ್ಮ ತಾಯಿನಾಡಿಗೆ ಮರುಳುತ್ತಿರುವುದು ಶರಣಪ್ಪ ನೇಮತಿ ಇವರ ದೇಶ ಸೇವೆ ಮಾಡಲುಗೇರಿ ಗ್ರಾಮದ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ.
ಭಾರತದ ಸೈನಿಕರ ವೀರರ ತ್ಯಾಗವನ್ನು ಎಷ್ಟು ಗುಣಧಾನ ಮಾಡಿದರು ತೀರಿಸಲು ಅಸಾಧ್ಯವಾಗುತ್ತದೆ, ಹವಲ್ದಾರ್ ಶರಣಪ್ಪ ನೇಮತಿ ಇಂತಹ ವೀರಯೋಧರರ ಸಾಹಸ ಧೈರ್ಯ ದೇಶ ಅಭಿಮಾನ ಇಂದಿನ ಮಕ್ಕಳು ಮತ್ತು ಯುವಕರು ಅಳವಡಿಸಿಕೊಂಡು ಭಾರತ ಮಾತೆಯ ಸೇವೆ ನೀಡಲು ತಾವು ಸಿದ್ಧವಾಗಬೇಕು ಎಂದು ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡರ ಹೇಳಿದರು.
ಶ್ರೀ ಗಾನಯೋಗಿ ಡಾ. ಪಂಡಿತ ಪುಟ್ಟರಾಜೇಶ್ವರ ಕಲಾಸಂಘ ಮಾಡಲಗೇರಿ ಇವರು ಆಯೋಜಿಸಿದ ನಿವೃತ್ತಿ ಹೊಂದಿದ ಸೈನಿಕ ಹಾಗೂ ಆಪರೇಷನ್ ಸಿಂಧೂರ ವಿಜೇತ ಶರಣಪ್ಪ ನೇಮತಿ ಇವರನ್ನು ತಾಯಿನಾಡು ಮಾಡಲಗೇರಿಗೆ ಸ್ವಾಗತಿಸಿಕೊಂಡು ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.




