ಇಳಕಲ್ :-ಕಂದಗಲ್ =ಹಲವು ದಶಕಗಳ ಹಿಂದೆ ಕಂದಗಲ್ ಗ್ರಾಮ ಧಾರ್ಮಿಕ ಆಚರಣೆಗೆ ಹೆಸರು ವಾಸಿಯಾಗಿತ್ತು ಕಳೆದ್ 20 ವರ್ಷಗಳಿಂದ ಗ್ರಾಮದಲ್ಲಿ ಶ್ರಾವಣಮಾಸದಲ್ಲಿ ಯಾವ್ ಧಾರ್ಮಿಕ ಕಾರ್ಯಕ್ರಮಗಳು ನೆಡೆಯದೆ ಧಾರ್ಮಿಸ್ಟ್ ಜನತೆಗೆ ಏನೋ ಒಂದು ಕಳೆದುಕೊಂಡಂತಾಗಿ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗಿತ್ತು
ಆದರೆ ಕಳೆದ ಮೂರು ವರ್ಷದಿಂದ ಶ್ರಾವಣ ಮಾಸದಲ್ಲಿ ಕನಕಗಿರಿ ಸುವರ್ಣಗಿರಿ ಸಂಸ್ತಾನ ವಿರಕ್ತಮಠದ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಭಕ್ತರ ಅಪೇಕ್ಷೆಯಂತೆ ಕಂದಗಲ್ಲಿನ ರುದ್ರುಸ್ವಾಮಿಮಠ ದಲ್ಲಿ ಮಹದಾಸೋಹಿ ಕಲಬುರ್ಗಿ ಶ್ರೀ ಶರಬಸವೇಶ್ವರ್ ಪುರಾಣ ಪ್ರವಚನ ಪ್ರಾರಂಬಿಸಿದ್ದು ಪ್ರವಚನವು ಪವಾಡ ಸ್ರಷ್ಟಿಸಿದಂತಾಗಿದೆ ಜಾತಿ ಬೇಧ ಎಣಿಸದೆ ಎಲ್ಲ ಜಾತಿ ಧರ್ಮಿಯರು ಪುರುಷರು ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಪುರಾಣ ಆಲಿಸಲು ಬರುತ್ತಿರುವದು ಹೊಸ ಇತಿಹಾಸ ಸ್ರಷ್ಟಿಸಿದೆ.
ಪುರಾಣ ಚರಿತ್ರೆಯ ಪವಾಡ ಪುರುಷ ಶರಣಬಸವೇಶ್ವರ ಜನನವಾಗಿದ್ದು ಇದಕ್ಕಾಗಿ ಅವರ ಹೆಸರಿನ ನಾಮಕರಣದ ಅಂಗವಾಗಿ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು 2 ಹೊಸ ತೊಟ್ಟಿಲು ತರಲಾಗಿತ್ತು ತೊಟ್ಟಿಲಕ್ಕೆ ವಿವಿಧ ಬಗೆಯ ಹೊ ಗಳಿಂದ ಅಲಂಕರಿಸಲಾಗಿತ್ತು ತೊಟ್ಟಿಲು ಕಾರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ, ಬೇಕಾದ ಎಲ್ಲ ವಸ್ತು ಗಳನ್ನು ತಂದಿದ್ದರು, ತೊಟ್ಟಿಲು ಕಾರ್ಯದ ಸಂಪ್ರದಾಯದಂತೆ ಗುಗ್ಗರಿ ತಂದು ಪ್ರಸಾದ ರೋಪದಲ್ಲಿ ಹಂಚಿದರು. ನಾಮಕರಣ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವ ಭಕ್ತರಿಗೆ ಡಾ ಶಾಂತವಿರ ಶಿವಾಚಾರ್ಯ ಸ್ವಾಮೀಜಿಗಳು ಪುರಾಣ ಪ್ರವಚನ ಮಾಡಿ ಅಧ್ಯಾತ್ಮದ ಭಾವನೆಯನ್ನು ತುಂಬಿದರು.
ಸಾನಿಧ್ಯ ವಹಿಸಿ ಮಾತನಾಡಿದ ಡಾ ಚನ್ನಮಲ್ಲ ಮಹಾಸ್ವಾಮಿಗಳು ಮನಸ್ಸಿನ ಮಲಿನತೆ ಕಳೆಯಲು ಪುರಾಣ ಪ್ರವಚನ ಆಧ್ಯಾತ್ಮಿಕ ಚಿಂತನೆಗಳು ಕಾರಣವಾಗುವಲ್ಲಿ ಸಂದೇಹವಿಲ್ಲ ಶರೀರವೆಂಬ ಈ ಹೊಲದಲ್ಲಿ ಜ್ಞಾನವನ್ನು ಬಿತ್ತಿ ಬೆಳೆದು ಮೋಕ್ಷ ಹೊಂದುವ ಈ ಜೀವನವನ್ನು ಶ್ರಾವಣದಲ್ಲಿ ಪುರಾಣ ಪುಣ್ಯ ಕಥೆ ಶ್ರವಣ ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕೆಂದು ಆಶೀರ್ವಚನ ನೀಡಿದರು
ಮಲ್ಲಿಕಾರ್ಜುನ ಹೂಗಾರ ಹಾಗೂ ವಿರೇಶ್ ಬಡಿಗೇರ ಅವರ ಸಂಗೀತ ಎಲ್ಲರನ್ನು ತೆಲೆ ದೂಗಿಸುವಂತೆ ಮಾಡಿತು.
ವರದಿ:- ದಾವಲ್ ಸೇಡಂ