ಗುರುಮಾಠಕಲ್ : ತಾಲೂಕಿನ ಕಾಳೆಬೆಳಗುಂದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಇದು ನೋಡು ಕಳೆದ ಒಂದು ವರ್ಷದಿಂದ ಕಟ್ಟಡದ ಮೇಲಚಾವಣಿ ಸಂಪೂರ್ಣ ಹಾಳಾಗಿ ಚತ್ತಿನ ಸಿಮೆಂಟ್ ಕೆಳೆಗೆ ಬೀಳುತ್ತಿರುವ ಸ್ಥಿತಿಯಲ್ಲಿ ಇದರ ಕೆಳಗಡೆ ಮಕ್ಕಳಿಗೆ ದಿನನಿತ್ಯ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಬಂದಿದೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂಡರೂ ಕೂಡ ಯಾವುದೇ ರೀತಿಯ ಪ್ರಯೋಜನೆ ಆಗಿಲ್ಲ ಮಕ್ಕಳಿಗೆ ಪರ್ಯಾಯವಾಗಿ ವಿದ್ಯಾಭ್ಯಾಸ ಮಾಡಲು ಬೇರೆ ಕಡೆ ಸ್ಥಳ ಅವಕಾಶ ಮಾಡಿಕೊಟ್ಟಿಲ್ಲ ಆ ಶಾಲೆಯಲ್ಲಿ ಹೆಚ್ಚುವರಿ ಕಟ್ಟಡವು ಸಹ ಇರುವುದಿಲ್ಲ ಹಾಗೂ ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾಡಳಿತ ಯಾದಗಿರಿ ಕಲ್ಯಾಣ ಕರ್ನಾಟಕ 2023-24 ನೇ ಸಾಲಿನ ಕೆ ಕೆ ಆರ್ ಡಿ ಬಿ ಯ ಅಕ್ಷರ ಅವಿಸ್ಕಾರ ಮೈಕ್ರೋ ಯೋಜನೆಯಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳೆಬೆಳಗುಂದಿ ಗ್ರಾಮದ ಶಾಲಾ ಕೊಠಡಿಗಳ ದುರಸ್ತಿ ಹಾಗೂ ಇತರ ಕಾಮಗಾರಿಗಳಿಗೆ ಅನುದಾನ ಬಂದಿದ್ದು ಅಂದಾಜು ಮೊತ್ತ SCP. 1.44 ಲಕ್ಷ tsp 0.39 ಲಕ್ಷ 1.17 ಲಕ್ಷ ಒಟ್ಟು 3 ಲಕ್ಷ ನಿರ್ಮಾಣಕ್ಕಾಗಿ ಕೆ ಆರ್ ಐ ಡಿ ಎಲ್ ಯಾದಗಿರಿ ತಾಲೂಕ ಗುರುಮಠಕಲ್ ಇವರಿಗೆ ಕಾಮಗಾರಿಯನ್ನು ವಹಿಸಿದ್ದು ಆದರೆ ಬಂದಿರುವ ಅನುದಾನ ಕಟ್ಟಡದ ಮಾಡುವುದಕ್ಕೆ ಆಗುವುದಿಲ್ಲ ಎಂದು ಬೇರೆ ಕ್ರೀಡಾ ಸಾಮಗ್ರಿಗಳು ಇನ್ನಿತರ ಕೆಲಸಕ್ಕೆ ಬಳಸಿಕೊಂಡಿರುತ್ತಾರೆ.

ಆದರೆ ಈಗ ಶಾಲೆಯ ಹೊಸ ಎರಡು ಕೋಠಡಿಗಳ ನಿರ್ಮಾಣಕ್ಕೆ ಅನುದಾನ ಬಂದಿರುತ್ತದೆ ಆದಷ್ಟು ಬೇಗನೆ ಹಳೆಯ ಕಟ್ಟಡವನ್ನು ಬೀಳಿಸಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕು ಮತ್ತು ಶಿಕ್ಷಣ ಇಲಾಖೆ ನಾಳೆಯಿಂದ ದುರಸ್ತಿ ಇರುವ ಕಟ್ಟಡಗಳಿಗೆ ಬೀಗ ಹಾಕಿ ಗ್ರಾಮದಲ್ಲಿ ಬೇರೆ ಸ್ಥಳದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಬೇಕು ಇಲ್ಲವಾದರೆ ಮಕ್ಕಳಿಗೆ ಅನಾಹುತ ಜರುಗಿದರೆ ಇದಕ್ಕೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲೂಕ ಅಧ್ಯಕ್ಷ ಶರಣಬಸಪ್ಪ ಎಲೆರಿ ಅವರು ಶಾಲೆಗೆ ಭೇಟಿ ನೀಡಿ ಅಧಿಕಾರಿಗಳ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕ ಪದಾಧಿಕಾರಿಗಳಾದ ದೇವಸಿಂಗ್ ಠಾಕೂರ್, ಮೌನೇಶ್ ಮಾಧ್ವಾರ, ತಾಯಪ್ಪ ಚೇಳಿಮೆಲಿ. ರಾಜು ಕಲಾಲ್, ಲಕ್ಷ್ಮಣ್ ಬಾಗಿಲಿ ಉಪಸ್ಥಿತರಿದ್ದರು.




