Ad imageAd image

ಅಮ್ಮನ ಜತೆ ಜಗಳವಾಡಿ ಮಗ ನೇಣಿಗೆ ಶರಣು, ಮಗನ ಶವ ನೋಡಿ ತಾಯಿ ಆತ್ಮಹತ್ಯೆ

Bharath Vaibhav
ಅಮ್ಮನ ಜತೆ ಜಗಳವಾಡಿ ಮಗ ನೇಣಿಗೆ ಶರಣು, ಮಗನ ಶವ ನೋಡಿ ತಾಯಿ ಆತ್ಮಹತ್ಯೆ
WhatsApp Group Join Now
Telegram Group Join Now

ಅಮ್ಮ(Mother)ನ ಜತೆ ಜಗಳವಾಡಿ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ನಡೆದಿದೆ. ಬಳಿಕ ಮಗನ ಶವ ನೋಡಿ ನೊಂದು ತಾಯಿ ಹಾಗೂ ಸಹೋದರಿ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ಏನೇ ಹೇಳಿದರೂ ತಮ್ಮ ಒಳ್ಳೆಯದಕ್ಕೆ ಎನ್ನುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಲೇಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಬೇಸರ ಮಾಡಿಕೊಂಡು ದೊಡ್ಡ ನಿರ್ಧಾರವನ್ನು ತೆಗೆದುಕೊಂಡರೇ ಮಕ್ಕಳಷ್ಟೇ ಪೋಷಕರು ಕೂಡ ನರಳುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.

ಗೋರಖ್​ಪುರ, ಮೇ 02: ಅಮ್ಮ(Mother)ನ ಜತೆ ಜಗಳವಾಡಿ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ನಡೆದಿದೆ. ಬಳಿಕ ಮಗನ ಶವ ನೋಡಿ ನೊಂದು ತಾಯಿ ಹಾಗೂ ಸಹೋದರಿ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ಏನೇ ಹೇಳಿದರೂ ತಮ್ಮ ಒಳ್ಳೆಯದಕ್ಕೆ ಎನ್ನುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಲೇಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಬೇಸರ ಮಾಡಿಕೊಂಡು ದೊಡ್ಡ ನಿರ್ಧಾರವನ್ನು ತೆಗೆದುಕೊಂಡರೇ ಮಕ್ಕಳಷ್ಟೇ ಪೋಷಕರು ಕೂಡ ನರಳುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.

ಕೇವಲ 1,500 ರೂ,ಗಳಿಗಾಗಿ ಅಮ್ಮ, ಮಗನ ನಡುವೆ ಕಲಹ ನಡೆದಿತ್ತು. ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 18 ವರ್ಷದ ಮೋಹಿತ್ ಕನೋಜಿಯಾ ತನ್ನ ಮೊಬೈಲ್ ರಿಪೇರಿ ಮಾಡಲು 55 ವರ್ಷದ ತಾಯಿ ಕೌಶಲ್ಯಾ ದೇವಿಯಿಂದ 1,500 ರೂ. ಕೇಳಿದಾಗ ಜಗಳ ಶುರುವಾಗಿತ್ತು. ಕೌಶಲ್ಯಾ ದೇವಿ ಹಣ ನೀಡಲು ನಿರಾಕರಿಸಿದ್ದರಿಂದ ಇಬ್ಬರ ನಡುವೆ ಜಗಳವಾಯಿತು.

ಮೋಹಿತ್ ನ 14 ವರ್ಷದ ಸಹೋದರಿ ಕೂಡ ಅಲ್ಲಿದ್ದಳು. ಇದೆಲ್ಲವೂ ಮನೆಯಿಂದ ಆಚೆಯೇ ನಡೆದಿತ್ತು. ಜಗಳ ಶುರುವಾದ ತಕ್ಷಣ ತನ್ನ ಮನೆಗೆ ಹೊರಟುಹೋದ ಮತ್ತು ಮನೆಯಲ್ಲಿ ಟವೆಲ್ ಬಳಸಿ ನೇಣು ಹಾಕಿಕೊಂಡಿದ್ದಾನೆ. ಮೋಹಿತ್ ಮುಂಬೈನಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದು, ಕುಟುಂಬದ ಖರ್ಚುಗಳನ್ನು ಭರಿಸುತ್ತಿದ್ದ. ಹಣ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೋಹಿತ್ ತನ್ನ ತಾಯಿ ಕೌಶಲ್ಯಾ ದೇವಿಗೆ ಹೇಳಿದ್ದಾಗಿ ಸ್ಥಳೀಯರು ಹೇಳಿದ್ದಾರೆ.

ತಾಯಿ ಮಗಳೊಂದಿಗೆ ಹಿಂದಿರುಗಿದಾಗ ಬಾಗಿಲು ಲಾಕ್ ಆಗಿರುವುದು ಕಂಡುಬಂದಿತ್ತು. ಬಾಗಿಲು ಬಡಿಯುತ್ತಾ ಕೂಗಲು ಪ್ರಾರಂಭಿಸಿದರು. ಅಕ್ಕ -ಪಕ್ಕದ ಮನೆಯವರೆಲ್ಲಾ ಅಲ್ಲಿ ಸೇರಿದ್ದರು. ಪಕ್ಕದ ಮನೆಯವರು ಟೆರೇಸ್​ ಮೂಲಕ ಮನೆಯೊಳಗೆ ಪ್ರವೇಶಿಸಿದ್ದರು. ಕಿಟಕಿ ಮೂಲಕ ನೋಡಿದಾಗ ಮೋಹಿತ್ ಶವ ನೇತಾಡುತ್ತಿರುವುದು ಕಾಣಿಸಿತ್ತು. ಕೌಶಲ್ಯ ದೇವಿ ಮತ್ತು ಅವರ ಮಗಳು ಮೋಹಿತ್ ದೇಹವನ್ನು ಹಿಡಿದುಕೊಂಡು ಅತ್ತಿದ್ದಾರೆ. ‘

ಮೋಹಿತ್‌ನ ದೇಹವನ್ನು ತಾಯಿ ಸುಮಾರು ಮೂವತ್ತು ನಿಮಿಷಗಳ ಕಾಲ ಹಿಡಿದಿದ್ದಳು, ನಂತರ ಕೌಶಲ್ಯಾ ದೇವಿ ಹಾಗೂ ಮಗಳು ವಿಷ ಸೇವಿಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಮೋಹಿತ್ ಅವರ ತಂದೆ ಹತ್ತು ವರ್ಷಗಳ ಹಿಂದೆ ನಿಧನರಾಗಿದ್ದರು. ಮೋಹಿತ್​ಗೆ ಇನ್ನೂ ಇಬ್ಬರು ಸಹೋದರಿಯರಿದ್ದು, ಇಬ್ಬರಿಗೂ ಮದುವೆಯಾಗಿದೆ ಹತ್ತಿರದ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!