ಕಾಗವಾಡ :500 ಕೋಟಿ ಮಹಿಳಾ ಪ್ರಯಾಣಿಕರಿಂದ ಉಚಿತ ಪ್ರಯಾಣ ಕಾಗವಾಡ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಕರ್ನಾಟಕ ಘನ ಸರ್ಕಾರದ ಶಕ್ತಿ ಯೋಜನೆಯಡಿ 500 ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ವಾಕರಸಾಸಂ ಕಾಗವಾಡ ವತಿಯಿಂದ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ವಿಜಯ್ ಅಕ್ವಟೆವರ್ ನೇತೃತ್ವದಲ್ಲಿ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಸಾರಿಗೆ ಸಂಸ್ಥೆ ದ ಅಧ್ಯಕ್ಷರಾದ ಹಾಗೂ ಕಾಗವಾಡ ಮತಕ್ಷೇತ್ರ ಜನಪ್ರಿಯ ಶಾಸಕ ರಾಜು ಕಾಗೆ ಅನುಷ್ಠಾನ ಮೂಲಕ ಬಡ ಜನರಿಗೆ ನಮ್ಮ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ, ಅದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು.

ಐದು ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯು ಹೆಚ್ಚು ಜನರಿಗೆ ಮುಟ್ಟಿದೆ ಎಂದು ಅಭಿಪ್ರಾಯಪಟ್ಟರು. ಇಲ್ಲಿಯವರೆಗೆ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ ಅನುದಾನದ ವಿವರವನ್ನು ಅಂಕಿ ಸಂಖ್ಯೆ ಸಮೇತ ಸಾರ್ವಜನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿ. ಪಂ ಅಧಿಕಾರಿ ವೀರಣ್ಣ ವಾಲಿ ರಮೇಶ್ ಚೌಗುಲೆ ಜ್ಯೋತಿ ಕುಮಾರ್ ಪಾಟೀಲ್ ಸೌರಬ್ ಪಾಟೀಲ್ ಕಾಕಾ ಪಾಟೀಲ್ ಚಿದಾನಂದ ಅವಟಿ ಮಾಂತೇಶ್ ಬಡಿಗೇರ್ ಪ್ರಕಾಶ್ ಪಾಟೀಲ್ ಮಲ್ಲಿಕಾರ್ಜುನ್ ಕಾಂಬಳೆ ಸೇರಿದಂತೆ ಈತರರು ಇದ್ದರು.
ವರದಿ:ಚಂದ್ರಕಾಂತ ಕಾಂಬಳೆ




