ಸೇಡಂ:- ಪಟ್ಟಣದ ವಾರ್ಡ್ ನಂಬರ್ 4ರಲ್ಲಿ ಗಣೇಶ್ ಚತುರ್ಥಿ ಅಂಗವಾಗಿ ನಡೆದ ಗಣೇಶ್ ಪ್ರತಿಷ್ಠಾಪನಾ ಪೂಜೆಯಲ್ಲಿ ಸೇಡಂನ ನೂತನ ಪುರಸಭೆ ಅಧ್ಯಕ್ಷರಾದ ವೀರೇಂದ್ರ ರುದ್ನೂರ್ ಹಾಗೂ ಪುರಸಭೆಯ ಉಪಾಧ್ಯಕ್ಷರಾದ ಶೇಹಜಾದ್ ಬಿ ಅವರು ಪಾಲ್ಗೊಂಡು ಪೂಜೆ ನೆರವೇರಿಸಿದರು.
ವಾರ್ಡ್ ನಂಬರ್ 4ರಲ್ಲಿ ಕೋಮಟಿ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ಗಣೇಶ್ ಮೂರ್ತಿಯನ್ನು ಶೇಹಜಾದ್ ಬಿ ಅವರು ತಮ್ಮ ಸ್ವಂತ ಖರ್ಚಿನಿಂದ ಪ್ರತಿಷ್ಠಾಪಿಸಿ ಇಲ್ಲಿ ಯಾವುದೇ ಜಾತಿಭೇದ ಇಲ್ಲವೆಂಬ ಸಂದೇಶ ಹೊರಡಿಸಿದರು.ಈ ಸಂದರ್ಭದಲ್ಲಿ ವಾರ್ಡ್ ನ ಎಲ್ಲಾ ಸದಸ್ಯರು ಸೇರಿ ಪುರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಿ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸೇಡಂ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮಾಶಂಕರ ಕೊಳ್ಳಿ, ಉಪಾಧ್ಯಕ್ಷರಾದ ಸತ್ತಾರ್ ನಾಡೆಪಲ್ಲಿ, ಅಶೋಕ್ ಮಹಡಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.
.