Ad imageAd image

ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮ ನೆಡೆಸಿದ ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದ : ಶೇಖರ್ ಬುದ್ಧ

Bharath Vaibhav
ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮ ನೆಡೆಸಿದ ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದ : ಶೇಖರ್ ಬುದ್ಧ
WhatsApp Group Join Now
Telegram Group Join Now

ಚಾಮರಾಜನಗರ : ಜಿಲ್ಲೆ ಕೊಳ್ಳೇಗಾಲ ಪಟ್ಟಣದ ಎಂ ಜಿ ಎಸ್ ವಿ ಕಾಲೇಜ್ ಮೈದಾನದಲ್ಲಿ ಇದೇ ಡಿಸಂಬರ್ 19ಹಾಗೂ 20ನೇ ತಾರೀಕು ಹೆಚ್. ಕೆ ಟ್ರಸ್ಟ್ ಮತ್ತು ಜಿ ಕನ್ನಡ ವಾಹಿನಿಯ ಸಹಯೋಗದಲ್ಲಿ ನಡೆದ ಕನ್ನಡ ಹಬ್ಬ ಹಾಗೂ ಆರಕ್ಷಕರಿಗೆ ನಮನ ಕಾರ್ಯಕ್ರಮವು ನಿಯಮ ಬಾಹಿರವಾಗಿದ್ದು.

ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನೆಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆಯ ಅನುಮತಿ ನೀಡದಿರುವುದು, ಹಾಗೆ ಪೋಲಿಸ್ ಇಲಾಖೆಯ ಅನುಮತಿಯು ಇಲ್ಲದೆ ಏಕಾಏಕಿ ಕಾಲೇಜು ಆವರಣದ ಗೇಟ್ ಬೀಗ ಹೊಡೆದು ಕಾರ್ಯಕ್ರಮವನ್ನು ನಡೆಸಿದ್ದಾರೆ.

ಕಳೆದ ಹತ್ತು ದಿನಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಪ್ರವಚನದಲ್ಲಿ ಅಡಚಣೆ ಉಂಟಾಗಿದ್ದು ಇದಕ್ಕೆ ಯಾರು ಹೊಣೆ.

ಸರ್ಕಾರದ ನಿಯಮದಂತೆ ಶಾಲಾ ಕಾಲೇಜು ಆವರಣಗಳನ್ನು ಯಾವುದೇ ಸಂಘ ಸಂಸ್ಥೆಗಳು ಕಾರ್ಯಕ್ರಮಕ್ಕೆ ಬಳಸಿಕೊಳ್ಳಲು ಪೂರ್ವ ಅನುಮತಿ ಪಡೆಯಬೇಕೆಂಬ ನಿಯಮವಿದ್ದರೂ.

ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಎಚ್. ಕೆ ಟ್ರಸ್ಟ್ ಹಾಗೂ ಜೀ ಕನ್ನಡ ವಾಹಿನಿಯವರು ನಡೆಸಿರುವ ಈ ಕಾರ್ಯಕ್ರಮವು ಕಾನೂನುಬಾಹಿರ ಕಾರ್ಯಕ್ರಮವಾಗಿದ್ದು.

ಇದರ ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವಮಾದಯ್ಯ ರವರು ಇಲಾಖೆಯ ಯೂನಿಫಾರಂ ಧರಿಸಿ ಅನುಮತಿ ಇಲ್ಲದ ವೇದಿಕೆಯ ಮೇಲೆ ಕಾನೂನುಬಾಹಿರವಾಗಿ ಹಾಡಿ ಕುಣಿದು ಕುಪ್ಪಳಿಸಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಒಳಪಟ್ಟಿದೆ
ಇವರ ಮೇಲೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿ ಸೇವೆಯಿಂದ ಅಮಾನತುಗೊಳಿಸಬೇಕೆಂದು ಶೇಖರ್ ಬುದ್ಧ ರವರು ಅಗ್ರಹಿಸಿದ.

ಆಯೋಜಕರ ಮೇಲೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುತ್ತೇನೆ ಹಾಗೂ ಇವರಿಗೆ ಶಿಕ್ಷೆ ಆಗುವ ತನಕ ಹೋರಾಟವನ್ನು ಮುಂದುವರಿಸುತ್ತೇನೆ

ಆಯೋಜಕರಿಗೆ ಕಾನೂನಿನ ಪಾಠ ಹೇಳಬೇಕಾಗಿದ್ದ ಸರ್ಕಾರದಲ್ಲಿ MLA ಆಗಿರುವ ಸ್ಥಳೀಯ ಶಾಸಕರಾದ ಎ ಆರ್ ಕೃಷ್ಣಮೂರ್ತಿ ಅವರೂ ಕೂಡ 19 ವರ್ಷಗಳಿಂದ ಸೋತಿದ್ದರು ಇವಾಗ ಗೆದ್ದಿರುವ ಖುಷಿಯಲ್ಲಿ ಅವರದೇ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಭಾಗವಹಿಸಿದ್ದಾರೆ ಇವರೆಲ್ಲರಿಗೂ ಕಾನೂನಿನ ಮೂಲಕ ಉತ್ತರ ಕೊಡುತ್ತೇನೆ ಎಂದು ಶೇಖರ್ ಬುದ್ಧ ರವರು ಮಾಧ್ಯಮದ ಜೊತೆ ತಿಳಿಸಿದರು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!