Ad imageAd image

ಸುತ್ತೂರು ಆದಿ ಜಾಂಬವ ಬಡಾವಣೆಯಲ್ಲಿ ಕುರುಬನ ಕಟ್ಟೆ ಕಡ್ಡಾಯ ಉತ್ಸವ

Bharath Vaibhav
ಸುತ್ತೂರು ಆದಿ ಜಾಂಬವ ಬಡಾವಣೆಯಲ್ಲಿ ಕುರುಬನ ಕಟ್ಟೆ ಕಡ್ಡಾಯ ಉತ್ಸವ
WhatsApp Group Join Now
Telegram Group Join Now

ಚಾಮರಾಜನಗರ:  ತಾಲ್ಲೋಕು ಸುತ್ತೂರು ಗ್ರಾಮದ ಆದಿ ಜಾಂಬವ ಬಡಾವಣೆಯಲ್ಲಿ ಕುರುಬನ ಕಟ್ಟೆ ಕಡ್ಡಾಯಗಳ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಇರಸವಾಡಿ ಗ್ರಾಮದ ಹೊರ ವಲಯದ ದೀನ ಕಟ್ಟೆಯಲ್ಲಿ ಕಂಡಾಯಗಳನ್ನು ಇರಿಸಿ ಶುಚಿಗೊಳಿಸಿ ಹೂ ಹೊಂಬಾಳೆ ಇಂದ ಅಲಂಕಾರ ಮಾಡಿ ಮಂಗಳವಾದ್ಯ ಹಾಗೂ ತಮಟೆ ಸದ್ದಿನಿಂದ, ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಗ್ರಾಮದ ಮುಖ್ಯ ರಸ್ತೆಯ ಮೂಲಕ ಸುತ್ತೂರು ಆದಿ ಜಾಂಬವರ ಬಡಾವಣೆಯವರೆಗೆ ಮಂಟೇಸ್ವಾಮಿ, ಸಿದ್ದಪ್ಪಾಜಿ ರವರ ಕಂಡಾಯಗಳನ್ನು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ಪ್ರಮುಖ ಬಡಾವಣೆಗಳಲ್ಲಿ ಕಂಡಾಯಗಳ ಮೆರವಣಿಗೆ ಬಂದಾಗ ಪೂಜೆ ಹಾಗೂ ಫಲ ಸಲ್ಲಿಸಿ, ಭಕ್ತರು ಭಕ್ತಿ ಸಮರ್ಪಿಸಿದರು.

ಮುಖಂಡರಾದ ಸೋಮಣ್ಣ ಉತ್ಸವದಬಗ್ಗೆ ಮಾತನಾಡಿದರು. ಮಾವಿನ ತೋರಣ ಹಾಗೂ ವಿವಿಧ ಬಗೆಯ ವಿದ್ಯುತ್ ದೀಪಗಳಿಂದ ಕೂಡಿ ಸ್ವರ್ಗದಂತೆ ಕಂಗೊಳಿಸಿತ್ತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಸೊಮ್ಮಣ್ಣ, ಕೃಷ್ಣ, ಸಿದ್ದೇಶ್, ಮಹೇಶ್, ಮಾದೇವ ಕೆಂಚ, ಮಹದೇವಸ್ವಾಮಿ ಆರ್ ಹಾಜರಿದ್ದರು.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
Share This Article
error: Content is protected !!