ನವದೆಹಲಿ: ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯನ್ನು 2-2 ರಿಂದ ಸಮ ಮಾಡಿಕೊಳ್ಳಲು ತಮ್ಮ ಮೊಣಚಾದ ಬೌಲಿಂಗ್ ಪ್ರದರ್ಶನದಿಂದ ನೆರವಾದ ಭಾರತ ಕ್ರಿಕೆಟ್ ತಂಡದ ವೇಗಿ ಮೊಹ್ಮದ್ ಶಿರಾಜ್ ಯಶಸ್ಸಿನ ಹಿಂದೆ ರೋಚಕ ಕಥನ ಇದೆ.

ಒಂದು ತ್ಯಾಗ ಮಾಡಿದರೆ, ಇನ್ನೊಂದು ಪ್ರಾಪ್ತಿ. ಎನ್ನುವಂತೆ ಮೊಹ್ಮದ್ ಶಿರಾಜ್ ಯಶಸ್ವಿ ಬೌಲರ್ ಆಗಲು ಒಂದು ರೋಚಕ ವಿಷಯ ಹೊರ ಬಂದಿದೆ. 31 ರ ಹರೆಯದ ಹೈದರಾಬಾದ್ ಬೌಲರ್ ಶಿರಾಜ್ ಅವರಿಗೆ ಬಿರ್ಯಾನಿ ಎಂದರೆ ತುಂಬಾ ಇಷ್ಟವಂತೆ. ಹೆಸರಾಂತ ಕ್ರಿಕೆಟ್ ಆಟಗಾರ ಆದ ನಂತರವೂ ಶಿರಾಜ್ ಗೆ ಬಿರ್ಯಾನಿ ಮೇಲೆ ಅತಿಯಾದ ಪ್ರೀತಿ. ಕ್ರಿಕೆಟರುಗಳು ತಮ್ಮ ಫಿಟ್ನೇಶ್ ಮೇಲೆ ಶಿಸ್ತು ಕಾಯ್ದುಕೊಳ್ಳಲು ತಮ್ಮ ಅಚ್ಚುಮೆಚ್ಚಿನ ತಿಂಡಿ ತಿನಿಸುಗಳನ್ನು ತಿನ್ನುವುದನ್ನು ನಿಲ್ಲಸಿ ತಮ್ಮ ಫಿಟ್ನೇಶ್ ಕಾಯ್ದುಕೊಳ್ಳುತ್ತಾರೆ.

ಬಿರ್ಯಾನಿ ಹೇಳಿ ಕೇಳಿ ಬೊಜ್ಜು ತರುವ ಖಾದ್ಯ. ಆದರೆ ಶಿರಾಜ್ ಗೆ ಬಿರ್ಯಾನಿ ತುಂಬಾ ಇಷ್ಟವಿತ್ತು. ಆದರೂ ತಮ್ಮ ಫಿಟ್ನೇಶ್ ಕಾಯ್ದುಕೊಂಡು ಯಶಸ್ವಿ ಬೌಲರ್ ಆಗಲು ಅವರು ತಮ್ಮ ಅಚ್ಚುಮೆಚ್ಚಿನ ಖಾದ್ಯ ಬಿರ್ಯಾನಿ ತಿನ್ನುವುದನ್ನೇ ಬಿಟ್ಟಿದ್ದಾರಂತೆ. ಒಂದು ಸಮಯದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿ ಆಗಲು ತಮ್ಮ ಮೆಚ್ಚಿನ ಮಸಾಲೆ ದೂಸೆಯನ್ನು ಬಿಟ್ಟಿದ್ದರಂತೆ.




