ಪೀಣ್ಯ ದಾಸರಹಳ್ಳಿ: ಭಾರತೀಯ ಸನಾತನ ಧರ್ಮದ ಉಳಿವಿಗಾಗಿ ದೇಶದ ಮತ್ತು ನಾಡಿನ ಶಾಂತಿ ನೆಮ್ಮದಿ ಸಮೃದ್ಧಿ ಸಕಲ ಸಂಪತ್ತು ಲಭಿಸುವಂತೆ ಶಕ್ತಿ ಹಾಗೂ ಎಲ್ಲರ ಆರಾಧ್ಯ ದೈವ ಶ್ರೀ ಶಿವ ಆಂಜನೇಯ ಸ್ವಾಮಿ.
ನಮ್ಮ ಹಿಂದೂ ಪರಂಪರೆಯ ಪವಿತ್ರ ಮಾಸವಾದ ಶ್ರಾವಣ ಮಾಸ ಶ್ರಾವಣ ಮಾಸದಲ್ಲಿ ಪ್ರತಿಯೋಬ್ಬರು ತಮ್ಮ ತಮ್ಮ ಮನೆಯಲ್ಲಿ ಅಥವಾ ಪವಿತ್ರ ಪುಣ್ಯಕ್ಷೇತ್ರಗಳಿಗೆ ಹೋಗಿ ದೇವತಾ ಪೂಜಾ ಪುನಸ್ಕಾರ ಸಲ್ಲಿಸುವುದು ಸಂಪ್ರದಾಯ ಅದರಂತೆ ಲಗ್ಗೆರೆಯ ಶ್ರೀ ಶಿವ ಆಂಜನೇಯ ಸ್ವಾಮಿಗೆ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಅಲಂಕಾರ ಹಾಲಿನ ಅಭಿಷೇಕ ಪೂಜೆ
ದೇವಸ್ಥಾನದ ಅರ್ಚಕರಿಂದ ಶಾಸ್ತ್ರೋಕ್ತವಾಗಿ ನೆರವೇರಿಸಿದ್ದರು.
ಶಿವ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಮುಖಂಡರಾದ ಬಿ.ರಾಮಯ್ಯ,ಎಂ.ರಮೇಶ್,ಜಿ.ಭೈರೇಗೌಡ, ಕೃಷ್ಣಯ್ಯ ಪಿ ಸೇರಿದಂತೆ ಇವರ ಸಮ್ಮುಖದಲ್ಲಿ ಸಾರ್ವಜನಿಕರು ಆಂಜನೇಯ ಸ್ವಾಮಿ ದರ್ಶನ ಪಡೆದು ಪ್ರೀತಿ ಭೋಜನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಿ. ಕೃಷ್ಣಮೂರ್ತಿ, ಜಗದೀಶ್ ಪ್ಪ, ನಾಗರಾಜು, ಪುಟ್ಟಸ್ವಾಮಿ, ಶ್ರೀನಿವಾಸ್, ಮಹಿಳೆಯರಾದ ರತ್ನ ಸಣ್ಣ ಮಾರಪ್ಪ, ವನಾಜಾಕ್ಷಿ,ಸುನಂದ,ಸಾವಿತ್ರಮ್ಮ, ಪದ್ಮಾ, ಮಂಜುಳಾ, ಭಾರತಿ ಮತ್ತು ಪಾರ್ವತಿ ನಗರ, ಪ್ರೀತಿ ನಗರದ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಭಾಗವಹಿಸಿ ಸ್ವಾಮಿ ದರ್ಶನ ಪಡೆದರು.




