ಮುದಗಲ್ಲ : ಜಾತಿ ಅಸಮಾನತೆಯ ವಿರುದ್ಧ ಹೋರಾಡಿ ಈ ದೇಶಕ್ಕೆ ಸಮಾನತೆಯನ್ನು ಸಾರುವ ಸುಸ್ಥಿರ, ಪವಿತ್ರ ಸಂವಿಧಾನ ನೀಡುವ ಮೂಲಕ ಕೋಟ್ಯಾಂತರ ಜನರ ಬಾಳಿಗೆ ಬೆಳಕಾದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆ ಯೊಳಗಡೆಯೇ ಅವಹೇಳನ ಮಾಡಿರುವುದು ಶೋಷಿತ ಸಮುದಾಯಗಳ ಮೇಲಿನ ದಾಳಿಯಾಗಿದೆ ಎಂದು ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವ ಶಂಕರಗೌಡ ತಿಳಿಸಿದ್ದಾರೆ.
ಕೇಂದ್ರದಲ್ಲಿ ಸ್ವತಃ ಗೃಹ ಸಚಿವರೇ ಲೋಕಸಭೆಯೊಳಗಡೆ ಅಂಬೇಡ್ಕರ್ ಅವಹೇಳನ ಮಾಡಿರುವುದರಿಂದ ಪ್ರೇರಿತರಾದ ರಾಜ್ಯ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಸದನದೊಳಗಡೆಯೇ ಮಕ್ಕಳ ಮತ್ತು ಮಹಿಳಾಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾರೆ.
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾಎನ್ನುವ ಗಾದೆಯಂತೆ ಕೇಂದ್ರ ಬಿಜೆಪಿ ನಾಯಕರ ಸಂವಿಧಾನ ವಿರೋಧಿ ಹೇಳಿಕೆಗಳಿಂದ ಪ್ರೇರಿತರಾದ ರಾಜ್ಯ ಬಿಜೆಪಿ ನಾಯಕ ಸಿ. ಟಿ. ರವಿ ಮಹಿಳೆಯರನ್ನು ಅವಹೇಳನ ಗೈಯುತ್ತಿದ್ದಾರೆ. ಭೇಠಿಬಚಾವೋ ಭೇಟಿ ಪಡಾವೋ ಎಂದು ಭಾಷಣದಲ್ಲಿ ಹೇಳುವ ಪ್ರಧಾನಿ ಮೋದಿಯವರು ಮಹಿಳಾವಿರೋಧಿ ರಾಜ್ಯ ಬಿಜೆಪಿ ನಾಯಕರ ವರ್ತನೆಗೆ ಮೌನ ಸಮ್ಮತಿ ನೀಡಿದ್ದಾರೆಯೆ ಎಂದು ಮುದಗಲ್ಲ ಬ್ಲಾಗ್ ಕಾಂಗ್ರೆಸ್ ಅಧ್ಯಕ್ಷ ರಾದ ಶಿವ ಶಂಕರ ಗೌಡ ಅವರು ಪ್ರಶ್ನಿಸಿದರು.
ಮನುಸ್ಮೃತಿಯ ಆರಾಧಕ ರಾಗಿರುವ ಬಿಜೆಪಿ ಹಾಗೂ ಅದರ ಅಂಗ ಸಂಘಟನೆಗಳು ದೇಶದ ಸಂವಿಧಾನದ ಮೇಲೆ ಯಾವುದೇ ನಂಬಿಕೆಯನ್ನು ಹೊಂದಿಲ್ಲವೆಂದು ಬಿಜೆಪಿಯವರು ನೀಡುವ ಸಂವಿಧಾನ ವಿರೋಧಿ ಹೇಳಿಕೆಗಳೇ ಸಾಕ್ಷಿಯಾಗಿವೆ.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿ ನಿಂದಲೂ ಬಿಜೆಪಿ ಪರಿವಾರ ರಾಷ್ಟ್ರನಾಯಕರಾದ ಗಾಂಧಿ, ನೆಹರು, ಅಂಬೇಡ್ಕರ್ ಅವರ ವಿರುದ್ದ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ನಿರಂತರವಾಗಿ ಅವಹೇಳನ ಮಾಡುತ್ತಾ ಬಂದಿದೆ.
ದೇಶದ ಜನರಿಗೆ ರಾಷ್ಟ್ರ ನಾಯಕರ ಬಗ್ಗೆ ಅಪನಂಬಿಕೆ ಬರುವಂತೆ ಕಟ್ಟು ಕಥೆಗಳನ್ನು ಕಟ್ಟುವ ಬಿಜೆಪಿಗೆ ಸಂವಿಧಾನ ಬದ್ದವಾಗಿ ಆಡಳಿತ ನಡೆಸುವ ಯಾವ ನೈತಿಕತೆಯೂ ಇಲ್ಲವಾಗಿದೆ ಎಂದು ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶಿವ ಶಂಕರ ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿದ ನೋವಿಗೆ
ಜೊತೆಗೆ ಮಹಿಳಾ ವಿರೋಧಿ ಸಿ. ಟಿ. ರವಿ ಅವರ ದುಷ್ಕೃತ್ಯವನ್ನು ಬೆಂಬಲಿಸುವ ಬಿಜೆಪಿ ಕಾರ್ಯಕರ್ತರ ಮನಸ್ಥಿತಿಯಿಂದ ಅತೀವನೋವಾಗಿದೆ. ಮಹಿಳೆಯರನ್ನು ದೇವಿ, ತಾಯಿ ಎಂದು ಪೂಜಿಸುವ ಮಾತುಗಳನ್ನು ಹೇಳುವ ಬಿಜೆಪಿಯ ಹಿಂಬಾಲಕರು ಮಹಿಳೆಯರನ್ನು ಅವಹೇಳನ ಗೈದ ಸಿ. ಟಿ. ರವಿಯನ್ನು ಬೆಂಬಲಿಸುತ್ತಿರುವುದು ನೋಡುವಾಗ ಇವರು ಮಾಡುವುದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಎಂಬಂತಾಗಿದೆ.
ಸದನದೊಳಗೆ ಸಂವಿಧಾನಿಕ ಪದಗಳನ್ನಾಡಿದ ಸಿ. ಟಿ. ರವಿ ವಿರುದ್ಧ ಕ್ರಮ ಕೈಗೊಂಡ ರಾಜ್ಯ ಸರಕಾರದ ಕಾರ್ಯಶ್ಲಾಘನೀಯ, ಅದೇ ರೀತಿ ಸಿ. ಟಿ. ರವಿ ಅವಹೇಳನಕಾರಿ ಮಾತುಗಳನ್ನು ಬೆಂಬಲಿಸಿ ಮಹಿಳೆಯರನ್ನು ನಿಂದಿಸುತ್ತಿರುವ ಅವರ ಹಿಂಬಾಲಕರ ವಿರುದ್ಧವೂ ಕಠಿಣ ಕ್ರಮವಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ
ವರದಿ: ಮಂಜುನಾಥ ಕುಂಬಾರ