Ad imageAd image

ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ಡಾನ್ಸ್ ಸ್ಪರ್ಧೆ

Bharath Vaibhav
ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ಡಾನ್ಸ್ ಸ್ಪರ್ಧೆ
WhatsApp Group Join Now
Telegram Group Join Now

ಐನಾಪುರ : ಛತ್ರಪತಿ ಶಿವಾಜಿ ಮಹಾರಾಜರುಮುಂದಾಲೋಚನೆ,ಯುದ್ಧ ತಂತ್ರಗಾರಿಕೆ,ರಾಷ್ಟ್ರಭಕ್ತಿ, ಹಾಗೂ ದೈವಭಕ್ತರಾಗಿದ್ದ ಅವರು ಹಿಂದವಿ ಸಾಮ್ರಾಜ್ಯವನ್ನು ಸ್ಥಾಪಿಸಿ ಹಿಂದೂ ಹೃದಯ ಸಾಮ್ರಾಟರಾದರು ಎಂದು ಅಥಣಿ ಮರಾಠ ಸಮಾಜ ಮುಖಂಡ ಪ್ರಭಾಕರ ಚೌಹಾಣ ಹೇಳಿದರು.

ಅವರು ಗುರುವಾರ ದಿ:19ರಂದು ಸಾಯಂಕಾಲ ಐನಾಪುರ ಪಟ್ಟಣದ ಗಾಂಧಿ ಚೌಕದಲ್ಲಿ ಮರಾಠ ಸಮಾಜ ವತಿಯಿಂದ ಹಮ್ಮಿಕೊಂಡ  ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ವಿವಿಧ ಸಾಂಸ್ಕೃತಿಕ ಸಮಾರಂಭವನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ  ಹಿಂದು ಜನಾಂಗ ಉಳಿಸುವ ಸಲುವಾಗಿ  ಮೌಲವಿ ಜನಾಂಗ ಒಗ್ಗುಡಿಸಿ ರಾಯಗಡದಲ್ಲಿ ಕೋಟೆ ಕಟ್ಟಿಸಿ ಹಿಂದು ಸಾಮ್ರಾಜ್ಯ ವನ್ನು ಸ್ಥಾಪನೆ ಮಾಡಿದ್ದವರು ಶಿವಾಜಿ ಮಹಾರಾಜರು ಅವರು ಜಾತ್ಯಾತೀತರಾಗಿದರು ಹಿಂದು ಸಾಮ್ರಾಜ್ಯವನ್ನು ನಾಶ ಮಾಡುವವರ ವಿರುದ್ಧ ಮಾತ್ರ ಯುದ್ದ ಮಾಡುತ್ತಿದರು ಎಂದರು.

ಇನ್ನೊರ್ವ ಅತಿಥಿ ಪ್ರಕಾಶ ಮೋರೆ ಮಾತನಾಡುತ್ತಾ ಗೆರಿಲ್ಲಾ ಮಾದರಿಯ ಯುಧ್ದವನ್ನು ಮೊಟ್ಟಮೊದಲ ಬಾರಿಗೆ ಆರಂಭಿಸಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ.  ಅವರ ದೃಢ ನಿರ್ಧಾರ ಹಾಗೂ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪಪಂ ಸದಸ್ಯ ತಮ್ಮಣ್ಣಾ ಪಾರಶೇಟ್ಟಿ, ಸಂಜಯ ಭಿರಡಿ ಮಾತನಾಡಿದರು.  ಅಧ್ಯಕ್ಷತೆಯನ್ನು ಹಿರಿಯರಾದ ದಾದಾ ಪಾಟೀಲ ವಹಿಸಿದ್ದರು. ವೇದಿಕೆ ಮೇಲೆ ಪಪಂ ಸದಸ್ಯ ಪ್ರವೀಣ ಗಾಣಿಗೇರ, ಉಮೇಶ ಕಾರ್ಚಿ, ಡಾ ಸಚೀನ ನಿಕ್ಕಂ ,ಪ್ರಕಾಶ ಮಾನೆ, ಭರತ ಲೋಂಡೆ, ರಾಜೇಂದ್ರ ಪೋತದಾರ, ಇತರರು ಇದ್ದರು. ಬೆಳಿಗ್ಗೆ ಸುಮಂಗಲೆಯರಿಂದ ಗಾಂಧಿಚೌಕ ವೃತ್ತದಲ್ಲಿ ಎಲ್ಲ ಮಹಿಳೆಯರು ಕೂಡಿಕೊಂಡು  ಬಾಲ ಶಿವಾಜಿ ಮಹಾರಾಜರ ಜೊಗುಳ ಹಾಡುವದರ ಮೂಲಕ ನಾಮಕರಣ ಮಾಡಿ ತೊಟ್ಟಿಲೊತ್ಸವ ಕಾರ್ಯಕ್ರಮ  ಮಾಡಿದರು.

ಪ್ರಾಸ್ತಾವಿಕವಾಗಿ ಕುಮಾರ ಗಾಣಿಗೇರ ಮಾತನಾಡಿದರು. ಅಣ್ಣಾಸಾಬ ಜಾಧವ ಸ್ವಾಗತಿಸಿದರು ಶಿವಗೌಡ ಚೌಗಲಾ ನಿರೂಪಿಸಿ ವಂದಿಸಿದರು.

ನಂತರ ವಿವಿಧ ಸಾಂಸೃತಿಕ (ಡ್ಯಾನ್ಸ) ಸ್ಪರ್ದೆಗಳು ಜರುಗಿದವು. ಪ್ರಥಮ ಕೆ.ಆರ್.ಇ ಶಿಕ್ಷಣ ಸಂಸ್ಥೆಯ ಹೈಸ್ಕೂಲ ವಿದ್ಯಾರ್ಥಿನಿಯರು, ದ್ವಿತೀಯ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿಯರು, ತೃತೀಯ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಚತುರ್ಥ ಕನ್ನಡ ಗಂಡು ಮಕ್ಕಳ ಶಾಲೆ ಕೃಷ್ಣಾ ಕಿತ್ತೂರ ವಿದ್ಯಾರ್ಥಿ ಪಡೆದುಕೊಂಡರು ಇಸಂದರ್ಭದಲ್ಲಿ ಮರಾಠ ಸಮಾಜ ಭಾಂದವರು ಪಟ್ಟಣದ ಎಲ್ಲ ನಾಗರಿಕರು ಇತರರು ಇದ್ದರು.

ವರದಿ : ಮುರಗೇಶ ಗಸ್ತಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!