ಗೋಕಾಕ : ಸರಕಾರ ಕಂದಾಯ ಇಲಾಖೆ, ಸಾರ್ವಜನಿಕರಿಗೆ ಹಲವಾರು ಇಲಾಖೆಗಳ ಸೌಲಬ್ಯಗಳನ್ನು ನೇರವಾಗಿ ಸುಲಭವಾಗಿ ಪಡೆಯಲಿಕ್ಕೆ ಕರ್ನಾಟಕ ಒನ್ ಮೂಲಕ ನೀಡಿದೆ, ತಮ್ಮ ಆಸ್ತಿ ತೆರಿಗೆ, ನೀರಿನ ಕರ, ಯುಜಿಡಿ ಕರ ಸೇರಿದಂತೆ ಇತರೆ ಎಲ್ಲ ಕರಗಳನ್ನು ಇನ್ನೂ ಮುಂದೆ ಕರ್ನಾಟಕ ಒನ್ ಕೆಂದ್ರಗಳಲ್ಲಿ ಪಾವತಿಸಬಹುದಾಗಿದೆ.
ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಹಿರೆಮಠ ಹೇಳಿದರು.
ಕೊಣ್ಣೂರ ಪಟ್ಟಣದಲ್ಲಿ ಕರ್ನಾಟಕ ಒನ್ ಪ್ರಾಂಚೈಸಿ ಹೊಂದಿರುವ ಗೀತಾ ಹಲಗಿ ಮತ್ತು ಸಂತೋಷ ತೇಲಿಯವರು ಕೇಂದ್ರದ ಆವರಣದಲ್ಲಿ ಬುದವಾರ ವಿದ್ಯುನ್ಮಾನ ನಾರೀಕರ ಸೇವಾ ವಿತರಣೆ ನಿರ್ದೇಶನಾಲಯ (ಇಡಿಸಿಎಸ್) ಹಾಗೂ ನಗರಸಭೆ ವತಿಯಿಂದ
ಕರ್ನಾಟಕ ಒನ್ ಕೇಂದ್ರಗಳಲ್ಲಿ ತೆರಿಗೆ ಪಾವತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತೆರಿಗೆ ಪಾವತಿ ಸರಳೀಕರಿಸುವ ಉದ್ಧೇಶದಿಂದ ರಾಜ್ಯ ಸರ್ಕಾರವು ವಿದ್ಯುನ್ಮಾನ ನಾರೀಕರ ಸೇವಾ
ವಿತರಣೆ ನಿರ್ದೇಶನಾಲಯ (ಇಡಿಸಿಎಸ್)ದ ಮೂಲಕ ರಾಜ್ಯದ ಎಲ್ಲ ಕರ್ನಾಟಕ
ಒನ್ ಕೇಂದ್ರಗಳಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಲು ಬಿಬಿಪಿಎಸ್ (ಭಾರತ
ಬಿಲ್ ಪೇ ಸಿಸ್ಟಮ್)ವ್ಯಸ್ಥೆಯನ್ನು ಜಾರಿ ಮಾಡಿದೆ. ಆ ಮೂಲಕ ಸ್ಥಳೀಯ ಸಂಸ್ಥೆಗಳ ತೆರಿಗೆಯನ್ನು ಕರ್ನಾಟಕ ಒನ್ ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ.ಅದಕ್ಕಾಗಿ ಸಾರ್ವಜನಿಕರು ತಮ್ಮ ಅಮೂಲ್ಯವಾದ ಸಮಯವನ್ನು ವ್ಯಯ ಮಾಡದೆ ಮುಂಜಾನೆ 8 ಗಂಟೆಯಿಂದ ರಾತ್ರಿ 10 ರ ವರೆಗೆ ಪ್ರಾರಂಭವಿರುವ ಕರ್ನಾಟಕ ಒನ್ ಕೇಂದ್ರಗಳ ಸದುಪಯೋಗದಿಂದ ಸಾರ್ವಜನಿಕರ ಸಕಾಲಕ್ಕೆ ತೆರಿಗೆ ಪಾವತಿಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಅದ್ಯಕ್ಷ ವಿನೋದ ಕರನಿಂಗ ಸದಸ್ಯರಾದ ಇಮ್ರಾನ ಜಮಾದಾರ,ಕಂದಾಯ ನೀರಿಕ್ಷಕ ರಮೇಶ ಸೊನ್ನದ, ಅಮರ ಬಡಿಗೇರ,ಸಂತೋಷ ತೇಲಿ,ಮನೋಹರ ಮೇಗೇರಿ, ಜಗದಾಳ ,ಶಿಂದಿಹಟ್ಟಿ ಸೇರಿದಂತೆ ಇನ್ನೂಳಿದವರು ಉಪಸ್ಥಿತರಿದ್ದರು.
ಮನೋಹರ ಮೇಗೇರಿ