ಮಾನ್ವಿ:ದಿನಾಂಕ 4.2.2025 ರ ಸಾಲಿನ ಮಕ್ಕಳ ಶಾಲಾ ಪ್ರವಾಸಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ ಎಸ್ಟಿ ಮಕ್ಕಳಿಗೆ ಪ್ರವಾಸಕ್ಕೆ ಇಂದು ಬೆಳಗ್ಗೆ ಮಾನವಿ ಪಟ್ಟಣದ ಶಾಸಕರ ಪುತ್ರರಾದ ಶಿವರಾಜ್ ವಕೀಲರು ಇಂದು ಚಾಲನೆ ನೀಡಿದರು.

ಮಕ್ಕಳಿಗೆ ಶಿಕ್ಷಣ ಪ್ರವಾಸವು ಕಲಿಕೆಗೆ ಅನುಕೂಲವಾಗುವುದು ಅನೇಕ ವಿಚಾರಗಳು ಮತ್ತು ಪ್ರವಾಸದಿಂದ ಮಕ್ಕಳ ದೈನಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಈ ಸಮಯದಲ್ಲಿ ಶಿವರಾಜ್ ವಕೀಲರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾನ್ವಿ ತಹಶೀಲ್ದಾರರಾದ ರಾಜು ಪಿರಂಗಿ ಮಹೇಶ್ ಕುಮಾರ್ ಅವರು ಪುರಸಭೆಯ ಅಧ್ಯಕ್ಷರಾದ ವೀರೇಶ್ ಗಂಡ ಲಕ್ಷ್ಮಿ ವಕೀಲ ಬಿಕೆ ಅಂಬರೀಶಪ್ಪ ಮಾಂತೇಶ್ ಪಾಟೀಲ್ ಮೌನೇಶ್ ಶಿಕ್ಷಕರು ಇನ್ನು ಅನೇಕರು ಭಾಗಿಯಾಗಿ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿದರು.
ವರದಿ: ಶಿವ ತೇಜ




