Ad imageAd image

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ !

Bharath Vaibhav
ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ !
WhatsApp Group Join Now
Telegram Group Join Now

ಸಿಂಧನೂರು : ತಾಲೂಕು ಆಡಳಿತ ಮತ್ತು ಭೋವಿ ವಡ್ಡರ್ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಂಡಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ತಾಲೂಕು ಆಡಳಿತ ಕಚೇರಿಯಲ್ಲಿ ಆಚರಿಸಿ ತದನಂತರ ಮೈಬೂಬ್ ಕಾಲೋನಿಯಲ್ಲಿರುವ ಸಿದ್ದರಾಮೇಶ್ವರ ನಾಮಪಲಕ್ಕೆ ಪೂಜೆ ಪುನಸ್ಕಾರಗಳೊಂದಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿ ಗಾಂಧಿ ವೃತ ದಿಂದ ಬಸವ ಕೇಂದ್ರ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ರವರೆಗೂ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಹಂಪನಗೌಡ ಬಾದರ್ಲಿ ಅವರ ಉಪಸ್ಥಿತಿಯಲ್ಲಿ ಕರೇಗೌಡ ಬಸವ ಕೇಂದ್ರ ತಾಲೂಕು ಘಟಕದ ಅಧ್ಯಕ್ಷ ಹಾಗೂ ನಿರುಪಾದಿ ಗುಡಿಹಾಳು ವಕೀಲರು ಮಾತನಾಡಿ, ಸಿದ್ದರಾಮೇಶ್ವರರು ಸಕಲ ಪ್ರಾಣಿ ಪಕ್ಷಿಗಳ ಒಳಿತಿಗಾಗಿ ಶ್ರಮಿಸಿ ಕರೆಗಳನ್ನು ಕಟ್ಟಿಸಿದರು ಹಾಗೂ ತನ್ನ ಕಠೋರ ಭಕ್ತಿಯಿಂದ ಶ್ರೀಶೈಲ ಮಲ್ಲಿಕಾರ್ಜುನನ್ನು ಒಲಿಸಿಕೊಂಡವರು ಯಂತ್ರಗಳೇ ಇಲ್ಲದ ಕಾಲದಲ್ಲಿ ಐತಿಹಾಸಿಕ ಕಟ್ಟಡಗಳನ್ನು ನಿರ್ಮಿಸಿದವರು ಕ್ರಾಂತಿಯ ಪರ್ವತವಾದ 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಸಿದ್ದರಾಮೇಶ್ವರ ಕೊಡುಗೆ ಅಪಾರವಾಗಿದೆ ಅವರು ಅಸಮಾನತೆ. ವರ್ಣ. ಜಾತಿ. ಲಿಂಗ ಬೇಧ. ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಸವ ಕೇಂದ್ರದ ಅಧ್ಯಕ್ಷ ಕರೇಗೌಡ ಕುರುಕುಂದಿ, ಭೋವಿ ಸಂಘದ ಅಧ್ಯಕ್ಷ ಲಕ್ಷ್ಮಣ ಬೋವಿ, ಜೆಡಿಎಸ್ ಮುಖಂಡ ಚಂದ್ರ ಭೂಪಾಲ್ ನಾಡಗೌಡ, ಝೆಡ್‌ಪಿ, ಮಾಜಿ ಸದಸ್ಯ ಎನ್. ಶಿವನಗೌಡ, ದೊಡ್ಡ ಬಸವ ಜವಳಗೇರಾ, ನಿರುಪಾದಪ್ಪ ಗುಡಿಹಾಳ ವಕೀಲರು, ಕಾಂಗ್ರೆಸ್ ಮುಖಂಡ ಎಚ್ಎನ್. ಬಡಿಗೇರ್, ರವಿ ಸೋಮಲಾಪುರ ನಗರ ಘಟಕ ಅಧ್ಯಕ್ಷರು, ವೆಂಕಟೇಶ್ ತುರುವಿಹಾಳ, ದ್ಯಾಮಣ್ಣ ಗುಂಡಾ, ದುರ್ಗಪ್ಪ ಹಂಚಿನಾಳ, ಗದ್ದೆಮ್ಮ ಹರಳಹಳ್ಳಿ ಇನ್ನು ಅನೇಕರಿದ್ದರು

ವರದಿ : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!