ಐನಾಪುರ : ಚಾಲುಕ್ಯ ಸಾಮ್ರಾಜ್ಯ ದಲ್ಲಿ ಅಲ್ಲಮಪ್ರಭು, ಅಕ್ಕ ಮಹಾದೇವಿ ಬಸವಣ್ಣ. ಗುರು ಸಿದ್ದರಾಮೇಶ್ವ ಶಿವಶರಣರು ಜನರ ಒಳಿತಿಗಾಗಿ ಸಾಮಾಜಿಕ ಕ್ರಾಂತಿ ಮಾಡಿದವರು ಸೊಲ್ಲಾಪುರ 4 ಸಾವಿರ ಶರಣರೊಂದಿಗೆ ನಿರ್ಮಿಸಿದ ಕರೆ ಇಂದಿಗೂ ಬತ್ತಿದ ನಿದರ್ಶನ ವಿಲ್ಲ. ಎಂದು ಸಮಾಜ ಮುಖಂಡರಾದ ವಸಂತ ಗಾಡಿವಡ್ಡರ ಹೇಳಿದರು.
ನಂತರ ಇನ್ನೋರ್ವ ಸಮಾಜದ ಮುಖಂಡ ಜಯವಂತ ಗಾಡಿವಡ್ಡರ ಮಾತನಾಡಿ ಕಲ್ಲು ಒಡೆಯುವದನ್ನು ಕಾಯಕವಾಗಿಸಿ ಸಿದ್ದರಾಮೇಶ್ವರ ಕುಲದ ಸಮಾಜದ ಭಾಂದವರು ಕಸುಬನ್ನು ಮರೆಯುವಂತಾಗಿದೆ ಎಂದ ಅವರು ಐನಾಪುರ ಪಟ್ಟಣದಲ್ಲಿ ಆರೇಳು ತಲೆಮಾರಿನಿಂದ ಗುಡ್ಡದ ಮಡ್ಡಿಯಲ್ಲಿ ಕಲ್ಲು ಒಡೆದು ಜೀವನ ಮಾಡುತ್ತಿದ್ದು, ನಮ್ಮ ಕೆಲವೊಂದು ಪಟಬದ್ರ ಹಿತಾಸಕ್ತಿಗಳು ಕೆಲಸವನ್ನು ನಿಲಿಸಿದ್ದಾರೆ. ಅದನ್ನು ಪುನಃ ಪ್ರಾರಂಭಿಸಬೇಕೆಂದು ಸಮುದಾಯ ಬೇಡಕೆಯಾಗಿದೆ ಎಂದರು.
ಇಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಯನ್ನು ಐನಾಪುರ ವಡ್ಡರ ಸಮಾಜ ವತಿಯಿಂದ ಆಚರಿಸಲಾಯಿತು.
ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪೂಜೆಯನ್ನು ಭೀಮು ಗುರವ
ಸಲ್ಲಿಸಿದರು.
ಈ ಸಂದರ್ಭದಲ್ಲಿವಡ್ಡರ ಸಮಾಜ ಭಾಂಧವರಾದ ನಿಖೀಲ ಗಾಡಿವಡ್ಡರ, ಅಭಿಷೇಕ ಗಾಡಿವಡ್ಡರ, ಸಂದೀಪ ಗಾಡಿವಡ್ಡರ, ಅಜೀತ ಗಾಡಿವಡ್ಡರ ಪಮ್ಮು ಗಾಡಿವಡ್ಡರ, ಅನೀಲ ಗಾಡಿವಡ್ಡರ, ಸಾಗರ ಗಾಡಿವಡ್ಡರ, ಕುಮಾರ ಗಾಡಿವಡ್ಡರ, ವಸಂತ ಗಾಡಿವಡ್ಡರ, ಯಮನಪ್ಪ ಗಾಡಿವಡ್ಡರ,ಅನೀಲ ಗಾಡಿವಡ್ಡರ, ಪರಶುರಾಮ ಗಾಡಿ ವಡ್ಡರ,ಮಹೇಶ ಗಾಡಿವಡ್ಡರ, ಅಶೋಕ ಗಾಡಿವಡ್ಡರ, ಪರಶು ಶಿವಾಜಿ ಗಾಡಿವಡ್ಡರ, ಶಂಕರ ಗಾಡಿವಡ್ಡರ, ಪರಶುರಾಮ ಗಾಡಿವಡ್ಡರ, ಮತ್ತಿತರರು ಇದ್ದರು.
ವರದಿ : ಮುರಗೇಶ ಗಸ್ತಿ