ಸಿಂಧನೂರು : ಶಿವಯೋಗಿ ಸಿದ್ದರಾಮೇಶ್ವರರ 852 ನೇ ಜಯಂತೋತ್ಸವದ ಕಾರ್ಯಕ್ರಮ ಜನವರಿ 15ರಂದು ತಾಲೂಕ ಆಡಳಿತ ಹಾಗೂ ನಮ್ಮ ಸಮುದಾಯದ ವತಿಯಿಂದ ಅದ್ದೂರಿಯಾಗಿ ನಡೆಯಲಿದೆ ಎಂದು ತಾಲೂಕ ಭೋವಿ (ವಡ್ಡರ್) ಸಂಘದ ಮಾಜಿ ಅಧ್ಯಕ್ಷ ಮರಿಯಪ್ಪ ಬಂಡಿ ಅಭಿಪ್ರಾಯ ವ್ಯಕ್ತಪಡಿಸಿದರು, “ನಂತರ ಭೋವಿ (ವಡ್ಡರ್) ಸಂಘದ ತಾಲೂಕ ಅಧ್ಯಕ್ಷರಾದ ಲಕ್ಷ್ಮಣ ಭೋವಿ ಅವರ ಅಧ್ಯಕ್ಷತೆಯಲ್ಲಿ ನಗರದ ಸರ್ಕಿಟ್ ಹೌಸ್ ನಲ್ಲಿ ಸೋಮವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅಂದು ನಗರದ ಮೆಹೆಬೂಬ್ ಕಾಲೋನಿಯಲ್ಲಿ ಸಿದ್ದರಾಮೇಶ್ವರ ನಾಮ ಫಲಕಕ್ಕೆ ಪೂಜೆ ಹಾಗೂ ಗಣ್ಯರಿಂದ ಮಾಲಾರ್ಪಣೆ ನಂತರ ನಗರದ ಕಲಾ ತಂಡಗಳೊಂದಿಗೆ ಮೆರವಣಿಗೆ ಜರಗಲಿದೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗುವ ಭಾವಚಿತ್ರ ಮೆರವಣಿಗೆಯಲ್ಲಿ ಸಮುದಾಯದ ಗಣ್ಯರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಭೋವಿ ಸಮಾಜದ ನೂತನ ಗ್ರಾಮ ಘಟಕದ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು
ದ್ಯಾಮಣ್ಣ ಗ್ರಾಮ ಘಟಕ ಅಧ್ಯಕ್ಷರು ಗುಂಡ, ವೀರೇಶ್ ಗ್ರಾಮ ಘಟಕ ಅಧ್ಯಕ್ಷರು ಅಲಬನೂರು, ಮಂಜುನಾಥ ಗ್ರಾಮ ಘಟಕ ಅಧ್ಯಕ್ಷರು ಬಂಗಾರಿ ಕ್ಯಾಂಪ್, ಹಾಗೂ ವಿಜಯಲಕ್ಷ್ಮಿ ಗ್ರಾಮ ಘಟಕ ಮಹಿಳಾ ಅಧ್ಯಕ್ಷರು ಸೋಮಲಾಪುರ, ಪದ್ಮ ನಾಗರಾಜ್ ಗ್ರಾಮ ಘಟಕ ಉಪಾಧ್ಯಕ್ಷರು ಸೋಮಲಾಪುರ,
ಈ ಸಮಯದಲ್ಲಿ- ರವಿ ಸೋಮಲಾಪುರ ನಗರ ಘಟಕ ಅಧ್ಯಕ್ಷರು ಸಿಂಧನೂರು, ವೆಂಕಟೇಶ್ ಹುಡ, ಕಾಳಿಂಗಪ್ಪ ಮುಕುಂದ, ತಿಮ್ಮ ರೆಡ್ಡಿ ಸಾಸುಮರಿ, ಗದ್ಯಮ್ಮ ಹರಳಹಳ್ಳಿ, ಹೊನ್ನಮ್ಮ ಕಲ್ಲೂರು, ಶಾಮಣ್ಣ ಕುರುಕುಂದಿ, ರಾಮಣ್ಣ ಗುಂಡ, ವೆಂಕಟೇಶ್ ಗಾಂಧಿನಗರ, ಅಂಬಣ್ಣ ಗುಂಜಳ್ಳಿ, ರಾಮಣ್ಣ ಜನತಾ ಕಾಲೋನಿ ಇದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ