
ರಾಯಬಾಗ: ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ,ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ, ಪದವಿ ಪೂರ್ವ ವಿದ್ಯಾಲಯ,ಹಾಗೂ ಪದವಿ ಮಹಾ ವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಷಡಕ್ಷರಿ ಶಿವಯೋಗಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ 97 ನೇ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶ್ರೀ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಸಂಸ್ಥೆಯ ಕಾರ್ಯದರ್ಶಿಗಳಾದ ಅಶೋಕ ಕೊಪ್ಪದ ಅವರು ಪೂಜೆ ಮಾಡಿದರು. ಅತಿಥಿಗಳಾದ ಮಲ್ಲನಗೌಡ ಪಾಟೀಲ್, ಬಸನಗೌಡ ಪಾಟೀಲ್, ಸಂಗಪ್ಪ ಜಂಬಗಿ, ಹನುಮ ಸಾಬ್ ನಾಯ್ಕ್, ಬಾಬಾ ಸಾಹೇಬ್ ಪಾಟೀಲ್, ಸಿದ್ದರಾಮೇಶ್ವರರ ಪವಾಡಗಳ ಕುರಿತು ಹೇಳಿದರು.

ತದನಂತರ ಕಾಲೇಜು ಆವರಣದಿಂದ ವಿದ್ಯಾರ್ಥಿಗಳು ಕೋಲಾಟ,ಲೇಜಿಮ್, ವೇಷಭೂಷಣ ಮಾಡಿಕೊಂಡು, ಹಾಗೂ ಕುಂಭ ಹೊತ್ತು ,ರೊಟ್ಟಿ ಬುತ್ತಿ ಹೊತ್ತು ಭವ್ಯ ಮೆರವಣಿಗೆ ಮೂಲಕ ಮಠಕ್ಕೆ ಹೋಗಿ, ಅಪ್ಪಾಜಿಯವರ ಹೆಸರಿನಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಿವಾನಂದ್ ಹಂಚಿನಾಳಹಾಗೂ ಸಿಬ್ಬಂದಿ ವರ್ಗದವರಾದ ಜಿ ಎಸ್ ಜಂಬಗಿ. ವಿ ಎಂ ಕರಡಿ.ಬಿ ಬಿ ಬಂಡಿಗಣಿ.ಅಪಾರ ವಿದ್ಯಾರ್ಥಿಗಳು ಹಾಗೂ ಪಾಲಕರು ಇನ್ನೂ ಹಲವಾರು ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ: ಪರಶುರಾಮ ತೆಳಗಡೆ




