Ad imageAd image

ನಿವೃತ್ತಿ ಹೊಂದಿದ ವೀರಯೋಧ ಶಿವರಾಜ್ ಬಲಗುಂದಿ ಇನ್ನಿಲ್ಲ

Bharath Vaibhav
ನಿವೃತ್ತಿ ಹೊಂದಿದ ವೀರಯೋಧ ಶಿವರಾಜ್ ಬಲಗುಂದಿ ಇನ್ನಿಲ್ಲ
WhatsApp Group Join Now
Telegram Group Join Now

ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಸಮೀಪವಿರುವ ಚಿಕ್ಕನಗನೂರು ಗ್ರಾಮದಲ್ಲಿ ಜನಿಸಿರುವ ಇವರು 2002 ರಲ್ಲಿ ಭಾರತೀಯ ಸೇನೆಗೆ ಸೇರಿ ಜಮ್ಮು-ಕಾಶ್ಮೀರ್ ಉದಯಪುರ ಮಹಾರಾಷ್ಟ್ರದ ತೆಲೆಗಾವ್ ಪಂಜಾಬ್ ಶ್ರೀನಗರದ ರಾಷ್ಟ್ರೀಯ ರೈಫಲ್ ನಲ್ಲಿ ಸೇವೆ ಸಲ್ಲಿಸಿ ಒಟ್ಟು ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತ್ತಿರುವ ಇವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ಇವರ ಅಂತ್ಯ ಸಂಸ್ಕಾರದಲ್ಲಿ ನಿವೃತ್ತಿ ಯೋಧರ ಸಂಘದ ವಿರೂಪಾಕ್ಷಯ್ಯ ಹಿರೇಮಠ, ವಿಜಯಕುಮಾರ್, ವೆಂಕಟೇಶ್ ನಿಲೋಗಲ್, ನಾಗಪ್ಪ, ನೀಲಪ್ಪ, ಮಹೇಶ್,ಅಬ್ದುಲ್ ರೆಹಮಾನ್, ಹಂಪಯ್ಯ,ಸಿದ್ದಯ್ಯ, ಮಾನಪ್ಪ, ಯೋಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜವನ್ನು ಹಾಕುವ ಮೂಲಕ ಅಂತಿಮ ನಮನ ಗೌರವ ಸಲ್ಲಿಸಿದರು.

ನಂತರ ಅವರ ಧರ್ಮಪತ್ನಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರ ಮಾಡುವ ಮೂಲಕ ವೀರಯೋಧ ನ ಅಂತಿಮ ದರ್ಶನ ಪಡೆದು ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಹಲವಾರು ಮುಖಂಡರು ಕುಟುಂಬಸ್ಥರು ಪಾಲ್ಗೊಂಡಿದ್ದರು.

ವರದಿ : ಶ್ರೀನಿವಾಸ ಮಧುಶ್ರೀ

WhatsApp Group Join Now
Telegram Group Join Now
Share This Article
error: Content is protected !!