—–ದರ್ಶಿನಿ ಕಾರ್ಯ ಗಾರಕ್ಕೆ ಚಾಲನೆ ನೀಡಿದ ತಾ.ಪಂ ಅಧಿಕಾರಿ ರವಿ ಕುಮಾರ್ ರೆಡ್ಡಿ ಮಾತು
ಸೇಡಂ: ತಾಲ್ಲೂಕು ಸಾಮರ್ಥ್ಯ ಸೌಧದಲ್ಲಿ ದರ್ಶಿನಿ ಸಂವೇದನಾತ್ಮಕ ತರಬೇತಿಯ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಅಂಕಿ ಸಂಖ್ಯೆ ಅಧಿಕಾರಿಗಳಾದ ರವಿಕುಮಾರ್ ರೆಡ್ಡಿ ಯವರು ಬುಧವಾರ ಬೆಳಗ್ಗೆ ತಾ.ಪಂ ಆವರಣದಲ್ಲಿ ದರ್ಶಿನಿ ಕಾರ್ಯ ಗಾರಕ್ಕೆ ಚಾಲನೆ ನೀಡಿದ ಅವರು ವಿಶೇಷ ಚೇತನರಿಗೆ ಎಲ್ಲಾ ಸೌಲಭ್ಯ ಗಳ ಪರಿಚಯಿಸಿ ಮುಖ್ಯ ವಾಹಿನಿಗೆ ತರಲು ಶ್ರಮಿಸಲು ಸಲಹೆ ನೀಡಿದರು.
ಮತ್ತು ಅ.ನ.ಸಾ.ರಾ.ಗ್ರಾ.ಸಂ ಪಂ.ರಾ. ಕೊಅರ್ಡಿನೇಟರ್ ಸುವರ್ಣ ಗಚ್ಚಿನ ಮಠ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು ಈ ಕಾರ್ಯಕ್ರಮಕ್ಕೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ತಾ.ಪಂ ಸಿಬ್ಬಂದಿ ವಿಷಯ ನಿರ್ವಾಹಕರು ಸುನಿಲಕುಮಾರ್, ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಭೀಮರೆಡ್ಡಿ ಹಾಗೂ ಜೈಭೀಮ ಅರಿವು ಕೇಂದ್ರದ ಮೇಲ್ವಿಚಾರಕರು ಮತ್ತು MRW ವೆಂಕಟಪ್ಪ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




