Ad imageAd image

ನನ್ನ ರಾಜ್ಯದಲ್ಲಿ ಓಡಾಡಲು ಅನುಮತಿ ಪಡೆಯಬೇಕಾ? : ಕಾಡಸಿದ್ದೇಶ್ವರ ಸ್ವಾಮೀಜಿ ಆಕ್ರೋಶ 

Bharath Vaibhav
ನನ್ನ ರಾಜ್ಯದಲ್ಲಿ ಓಡಾಡಲು ಅನುಮತಿ ಪಡೆಯಬೇಕಾ? : ಕಾಡಸಿದ್ದೇಶ್ವರ ಸ್ವಾಮೀಜಿ ಆಕ್ರೋಶ 
WhatsApp Group Join Now
Telegram Group Join Now

ಕೊಲ್ಹಾಪುರ: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ವಿಜಯಪುರ ಜಿಲ್ಲೆಗೆ ಎರಡು ತಿಂಗಳ ಕಾಲ ನಿರ್ಬಂಧ ವಿಧಿಸಿರುವ ಸರ್ಕಾರದ ಕ್ರಮಕ್ಕೆ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲ್ಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ನಾನೇನೂ ಪಾಕಿಸ್ತಾನದಲ್ಲಿ ಇಲ್ಲ, ಅಫ್ಗಾನಿಸ್ತಾನದಲ್ಲಿಯೂ ಇಲ್ಲ.ನನ್ನ ದೇಶದಲ್ಲಿ ನನ್ನ ರಾಜ್ಯದಲ್ಲಿ ನಾನಿನಿದ್ದೇನೆ. ನನ್ನ ರಾಜ್ಯದಲ್ಲಿ ಓಡಾಡಲು ನಾನು ಅನುಮತಿ ಪಡೆಯಬೇಕಾ? ಇದು ಯಾವ ರೀತಿ ನಿಯಮ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆದಿದೆ. ನನ್ನನ್ನು ಕರ್ನಾಟಕದಿಂದಲೇ ನಿರ್ಬಂದ ಹೇರುವ ಪ್ರಯತ್ನವೂ ನಡೆಯುತ್ತಿದೆ. ಮುಖ್ಯಕಾರ್ಯದರ್ಶಿಗಳಿಂದಲೇ ಆದೇಶ ಹೊರಡಿಸುವ ಬಗ್ಗೆ ಚರ್ಚೆಯಾಗುತ್ತಿದೆ ಎಂದು ತಿಳಿದುಬಂದಿದೆ.

ಅಂತಹದ್ದೇನು ಮಾಡಿದ್ದೇನೆ? ವಿಜಯಪುರಕ್ಕೆ ನನಗೆ ನಿರ್ಬಂಧ ಹೇರಿರುವುದು ಯಾಕೆ. ಈ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಸರ್ಕಾರದ ಪರ ವಕೀಲರು ಸ್ವಾಮೀಜಿ ಹಿತದೃಷ್ಟಿಯಿಂದ ಅವರ ಸುರಕ್ಷತೆಗಾಗಿ ಈ ನಿರ್ಧಾರ ಎಂದಿದ್ದಾರೆ.

ನನಗೆ ರಕ್ಷಣೆ ನೀಡಬೇಕೆಂದರೆ ಭದ್ರತಾ ಸಿಬ್ಬಂದಿಯನ್ನು ಕೊಡಿ ಅದನ್ನು ಬಿಟ್ಟು ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಎಷ್ಟು ಸರಿ? ಎಂದು ಕಿಡಿಕಾರಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!