ಹುಬ್ಬಳ್ಳಿ : ಖತರ್ನಾಕ್ ಯುವಕನ್ನೊಬ್ಬ ಪ್ರಾಧ್ಯಾಪಕಿಗೆ ಸಿಕ್ಕಾಪಟ್ಟೆ ಟಾರ್ಚರ್ ಕೊಟ್ಟಿದ್ದಾನೆ. ಹುಬ್ಬಳ್ಳಿಯಲ್ಲಿ ಘಟನೆ ನಡೆದಿದ್ದು, ಅಶ್ಲೀಲ ವಿಡಿಯೋ ಹಾಗೂ ಫೋಟೋ ತೋರಿಸಿ ಬ್ಲಾಕ್ಮೇಲ್ ಮಾಡಿದ್ದಾನೆ.
ಸಂತ್ರಸ್ತ ಪ್ರಾಧ್ಯಾಪಕಿಯ ಅಶ್ಲೀಲ ವಿಡಿಯೋವನ್ನು ಗೌಪ್ಯವಾಗಿ ರೆಕಾರ್ಡ್ ಮಾಡಿಕೊಂಡು ಮಾನಸಿಕ ಹಿಂಸೆ ನೀಡಿದ್ದಾನೆ.ಶಶಿ (25) ಎಂಬಾತನ ವಿರುದ್ಧ ಆರೋಪ ಕೇಳಿಬಂದಿದ್ದು, ಮದುವೆ ಆಗುವಂತೆ ಪೀಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಪ್ರಾಧ್ಯಾಪಕಿಯ ಸಹೋದರನಿಗೆ ಇವುಗಳನ್ನು ಕಳಹಿಸಿದ್ದಾನೆ. ಸಹದ್ಯೋಗಿಗಳು ಹಾಗೂ ಕುಟುಂಬಸ್ಥರಿಗೆ ವಾಟ್ಸಾಪ್ ಮೂಲಕ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾನೆ ಎಂದು ಪ್ರಾಧ್ಯಾಪಕಿ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಶಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.




