Ad imageAd image

ಕಲಬುರಗಿ ಡಾ. ಶರಣಬಸಪ್ಪ ಅಪ್ಪ ನಿಧನಕ್ಕೆ ಶ್ರದ್ಧಾಂಜಲಿ

Bharath Vaibhav
ಕಲಬುರಗಿ ಡಾ. ಶರಣಬಸಪ್ಪ ಅಪ್ಪ ನಿಧನಕ್ಕೆ ಶ್ರದ್ಧಾಂಜಲಿ
WhatsApp Group Join Now
Telegram Group Join Now

ಚಿಂಚೋಳಿ: ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಕಲಬುರಗಿ ಡಾ. ಶರಣಬಸಪ್ಪ ಅಪ್ಪ 8ನೇ ಮಹಾದಾಸೋಹ ಪೀಠಾಧಿಪತಿಗಳು ಶರಣಬಸವೇಶ್ವರ ಸಂಸ್ಥಾನ, ಅವರು ನಿನ್ನೆ ನಿಧನ ಹೊಂದಿದ್ದ ಕಾರಣ ಚಿಂಚೋಳಿ ತಾಲೂಕ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪರಮ ಪೂಜ್ಯ ಡಾ. ಶರಣಬಸಪ್ಪ ಅಪ್ಪ,ಭಾವಚಿತ್ರಕ್ಕೆ ಲೋಕೋಪಯೋಗಿ ಇಲಾಖೆಯ ಕಿರಿಯ ಸಹಾಯಕರ ಗಿರಿರಾಜ್ ಸಜ್ಜನ್, ಅವರು ಪೂಜೆ ಮಾಡಿದರು ಕಾರ್ಯಕ್ರಮ ಉದ್ದೇಶಿಸಿ ವೀರಶೈವ ಲಿಂಗಾಯತ್ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವ ಕುಮಾರ್ ಪಾಟೀಲ,ಅವರು ಮಾತನಾಡಿ ಪೂಜ್ಯ ಡಾ.ಶರಣಬಸಪ್ಪ ಅಪ್ಪ,ಅವರು 8ನೇ ಮಹಾದಾಸೋಹ ಪೀಠಾಧಿಪತಿಗಳು ಆಗಿ ಕಲ್ಯಾಣ ಕರ್ನಾಟಕದ ಜನರಿಗೆ ವಿದ್ಯಾ ದಾಸೋಗ ಮತ್ತು ಅನ್ನದಾಸೋಗ ಹಾಗೂ ವೀರಶೈವ ಲಿಂಗಾಯತ ಸಮಾಜದಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ.

ಅದೇ ರೀತಿ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಸಂದರ್ಭದಲ್ಲಿ ದಿಲ್ಲಿಯಲ್ಲಿ ಸಂಸದ್ದಲ್ಲಿ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ತಳಿಯನ್ನು ಸ್ಥಾಪನೆ ಮಾಡಿದ್ದಾರೆ ಅದೇ ರೀತಿ ಕಲ್ಯಾಣ ಕರ್ನಾಟಕದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಉತ್ತಮವಾದ ಶಿಕ್ಷಣವನ್ನು ಕೊಟ್ಟಿದ್ದಾರೆ ಮುಂಬರುವ ದಿನದಲ್ಲಿ ಕೂಡ 9ನೇ ಪೀಠದ ಪೂಜಾ ಚಿರಂಜೀವಿ ದೊಡ್ಡಪ್ಪ ಅವರು ಕೂಡ ಶರಣಬಸಪ್ಪ ಅಪ್ಪವರ ದಂತೆ ಕಲ್ಯಾಣ ಕರ್ನಾಟಕದ ಜನರಿಗೆ ಉತ್ತಮವಾದ ಸೇವೆಯನ್ನು ನೀಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸುಭಾಷ್ ಚಂದ್ರಎಂಪಳ್ಳಿ,ರವೀಂದ್ರ ಬಂಡೆಪ್ಪನೋರ್,ವೀರೇಶ್ ದೇಸಾಯಿ, ಶಿವಶರಣಪ್ಪ ಡೈಂಗಿ, ಸುರೇಶ ಬಾಟಗಿರಿ ಅಣ್ಣವರ, ನಾಗೇಂದ್ರಪ್ಪ ಬಿರಾದಾರ ಅಣ್ಣವರ, ವಿಜಯ್ ಕುಮಾರ್ ಬೆಳಕೇರಿ,ಚಂದ್ರಶೇಖರ್ ಪಾರ, ಮಲ್ಲಿನಾಥ್ ಮೇಲಗಿರಿ,ದೇಶಮುಖ್ ಬಿರಾದರ್, ವಿವೇಕ್ ಪಾಟೀಲ,ನಾಗರಾಜ್ ಸೀಳಿನ, ಅಲ್ಲಮಪ್ರಭು ಮಡಪತಿ,ಚೇತನ್ ಹುಡದಳ್ಳಿ, ಸುರೇಶ್ ಕಲ್ಲೂರ್ಕರ್,ನಾಗೇಶ್ ಹೂಗಾರ, ನಮ್ಮ ಕರ್ನಾಟಕ ಸೇನೆಯ ತಾಲೂಕ ಸಂಚಾಲಕರದ ಸುಧಾಕರ್ ಗೌಡ,ಇವರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಸುನಿಲ್ ಸಲಗರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!