Ad imageAd image

ಎಬಿಬಿ ಮಂಜಣ್ಣ ನೇತತ್ವದಲ್ಲಿ ಬಾಗಲಗುಂಟೆ ಪ್ರೌಢಶಾಲೆಯಲ್ಲಿ ಶ್ರಾವಣ ಜಾನಪದ ಸಂಭ್ರಮ್ ಆಚರಣೆ

Bharath Vaibhav
ಎಬಿಬಿ ಮಂಜಣ್ಣ ನೇತತ್ವದಲ್ಲಿ ಬಾಗಲಗುಂಟೆ ಪ್ರೌಢಶಾಲೆಯಲ್ಲಿ ಶ್ರಾವಣ ಜಾನಪದ ಸಂಭ್ರಮ್ ಆಚರಣೆ
WhatsApp Group Join Now
Telegram Group Join Now

ಬೆಂಗಳೂರು: –ಪೀಣ್ಯ,ದಾಸರಹಳ್ಳಿ ‘ಹಿಂದಿನ ಕಾಲದಲ್ಲಿ ಇದ್ದ ಜಾನಪದ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಾವಣ ಜಾನಪದ ಸಂಭ್ರಮದ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಬೇಕು. ಕಡಬಗೆರೆ ಮುನಿರಾಜು ಹಾಗೂ ಕುಣಿಗಲ್ ರಾಮಚಂದ್ರ ಜಾನಪದ ಗಾಯಕರು ಜಾನಪದದ ಸೊಗಡನ್ನು ಎಲ್ಲೆಡೆ ಪಸರಿಸುವಂತಹ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕು’, ಎಂದು ಶ್ರೀನಿವಾಸ ಮಂಜುನಾಥ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷ ಡಾ. ಎಸ್ ಮಂಜುನಾಥ್ (ಎಬಿಬಿ ಮಂಜಣ್ಣ) ಹೇಳಿದರು.

ಬಾಗಲಗುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀನಿವಾಸ ಮಂಜುನಾಥ ಫೌಂಡೇಶನ್ ಹಾಗೂ ಸೇವಾನಿಧಿ ಶಿಕ್ಷಣ ಮತ್ತು ಸಾಂಸ್ಕೃತಿಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ‘ಶ್ರಾವಣ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಅವರು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟಕ ಖ್ಯಾತ ಜಾನಪದ ಗಾಯಕ ಕಡಬಗೆರೆ ಮುನಿರಾಜು ಮಾತನಾಡಿ, ‘ನಮ್ಮ ನಾಡಿನ ಮತ್ತು ಹಳ್ಳಿಯ ಸಂಸ್ಕೃತಿ ಸಂಪ್ರದಾಯದ ಮೂಲ ಕಲೆಯಾದ ಜಾನಪದ ಗಾಯನಗಳಿಗೆ ಬೆಲೆ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಎಬಿಬಿ ಮಂಜಣ್ಣ ಹಾಗೂ ಕುಣಿಗಲ್ ರಾಮಚಂದ್ರ ಸಹಕಾರದಿಂದ ಈ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಜಾನಪದ ಕಲೆಗೆ ಜೀವಂತವಾಗಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಕಾರ್ಯ ಶ್ಲಾಘನೀಯ’, ಎಂದು ಹೇಳಿದರು.

ಜಾನಪದ ಸಂಭ್ರಮದ ಅಂಗವಾಗಿ ಜಾನಪದ ಕಲೆ ಸಾರುವ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಹಾಗೂ ಆಧುನಿಕತೆಯಿಂದ ಕಣ್ಮರೆಯಾಗುತ್ತಿರುವ ಪರಿಕರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.ಜಾನಪದ ಕಣಜ ಎಂದೇ ಚಂದನ ಟಿವಿಯ ಗಾನ ಗಾರುಡಿಗ ಕಾರ್ಯಕ್ರಮದ ರೂವಾರಿ ಕಡಬಗೆರೆ ಮುನಿರಾಜು ಅವರ ಮಧುರ ಕಂಠದಲ್ಲಿ ಹಲವಾರು ಜಾನಪದ ಹಾಡುಗಳು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ರಂಜಿಸಿದವು.

ದೇಶ ಸೇವೆ ಮಾಡಲು ತಮ್ಮ ಮಗನನ್ನು ಸೇನೆಗೆ ಕಳುಹಿಸಿರುವ ಎಬಿಬಿ ಮಂಜಣ್ಣರವರಿಗಾಗಿ ಹಾಡಿರುವ ಹಾಡನ್ನು ಇದೇ ವೇಳೆ ಪ್ರಸ್ತುತಪಡಿಸಲಾಯಿತು. ಜಾನಪದ ಕಲಾವಿದ ಕುಣಿಗಲ್ ರಾಮಚಂದ್ರ ನೇತೃತ್ವದಲ್ಲಿ ಹಲವಾರು ಜಾನಪದ ಹಾಡುಗಳು ಶಾಲಾ ವಿದ್ಯಾರ್ಥಿಗಳಿಂದ ಹಾಡಿಸಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ವೇಣುಗೋಪಾಲ್, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ್, ರಮೇಶ್, ಶೃತಿ, ರೂಪಾ, ಆಶಾ, ಚಕ್ರಪಾಣಿ, ಶಿಕ್ಷಕ ವೆಂಕಟೇಶ್, ವಿನೋದ್, ಚಿದಾನಂದ್, ದೀಪಾ, ರೇಣು, ಪರಿಮಳಾ, ಪೂರ್ಣಿಮಾ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಬಾಗಲಗುಂಟೆಯ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದರು.

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!