Ad imageAd image
- Advertisement -  - Advertisement -  - Advertisement - 

ಶ್ರೀ ಜಗದ್ಗುರು ಶಂಕರಾಚಾರ್ಯ ಕರವಿರ ಮಠ ಶ್ರಾವಣಮಾಸದ ಶುಭದಿ ಅಭಿಷೇಕ ಕಾರ್ಯಕ್ರಮ

Bharath Vaibhav
ಶ್ರೀ ಜಗದ್ಗುರು ಶಂಕರಾಚಾರ್ಯ ಕರವಿರ ಮಠ ಶ್ರಾವಣಮಾಸದ ಶುಭದಿ ಅಭಿಷೇಕ ಕಾರ್ಯಕ್ರಮ
WhatsApp Group Join Now
Telegram Group Join Now

ಸಂಕೇಶ್ವರ :-ಶ್ರೀ ಜಗದ್ಗುರು ಶಂಕರಾಚಾರ್ಯ ಕರವಿರ ಮಠ ಶಂಕೇಶ್ವರ ಶ್ರೀ ಶ್ರೀ ವಿದ್ಯಾ ನರಸಿಂಹ ಭಾರತಿ ಸ್ವಾಮೀಜಿ ಶ್ರೀ ಹರಿಹರಬಾದ ಸ್ವಾಮೀಜಿ ದರ್ಬಾರ ಜಿಲ್ಲಾ ಬಿದ ಇವರ ಸಹಸ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ

ಈ ಅಭಿಷೇಕವನ್ನು ಶ್ರೀ ಪ್ರಕಾಶ ಭೋಸಗೋಳ ಇವರು ನೆರವೇರಿಸಿ ನಂತರ ಈ ಅಭಿಷೇಕವನ್ನು ಹಿರಣ್ಯಕೇಶಿ ನದಿಗೆ ಬಿಡಲಾಯಿತು.ಪ್ರತಿಯೊಬ್ಬ ಭಕ್ತರು ತಿಳಿದುಕೊಳ್ಳುವುದೇನೆಂದರೆ ತಮ್ಮ ಒಂದು ವರ್ಷದ ಕಮಾಯಿಸಿದರಲ್ಲಿ 10% ತೆಗೆದು ಈ ರೀತಿ ಅಭಿಷೇಕ ಮಾಡುವುದರಿಂದ ಭಕ್ತರಿಗೆ ಏನು ಪ್ರಯೋಜನ ಎಂಬುದನ್ನು ಶ್ರೀ ಸ್ವಾಮೀಜಿಯವರು ನಮ್ಮ ಭಾರತ ವೈಭವ ವಾಹಿನಿಗೆ ಸ್ಪಷ್ಟವಾಗಿ ತಿಳಿಸಿದರು.

ಈ ಅಭಿಷೇಕ ಮಾಡುವುದರಿಂದ ಜನರಲ್ಲಿ ಸಂತಸ, ಆನಂದ, ಸಮೃದ್ಧಿ, ಆತ್ಮ ಶಾಂತಿ, ಹೆಚ್ಚುಆಯಸ್ಸು, ಸಂಸಾರಿಕ ಬೆಳವಣಿಗೆ, ಕಂಟಕ ನಿವಾರಣೆ, ಇಂತಹ ಹಲವು ಯೋಗ್ಯವಾದ ವರಗಳನ್ನು ನಮ್ಮಲ್ಲಿ ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯ ಎಂದರು .

ಸುಮಾರು ವರ್ಷಗಳಿಂದ ನಮ್ಮ ಭಾರತ ವೈಭವ ದಿನಪತ್ರಿಕೆ ಹಾಗೂ ಬಿ ವಿ 5 ನ್ಯೂಸ್ ವರದಿಗಾರರಾದ ರಾಜು ಮುಂಡೆಯವರು ಈ ಸೇವೆಯನ್ನು ಮಾಡುತ್ತಿರುವುದರಿಂದ ಅವರಿಗೆ ಶ್ರೀ ವಿದ್ಯ ನರಸಿಂಹ ಭಾರತೀಯ ಸ್ವಾಮೀಜಿ ಅವರು ಸತ್ಕಾರ ಹಾಗೂ ಸನ್ಮಾನ ಮಾಡಿ ಶುಭ ತೆಂಗಿನಕಾಯಿ ಹೊರ ನೀಡಿ ಶುಭ ಹಾರೈಸಿ ತಮ್ಮ ಅನಿಸಿಕೆಗಳನ್ನು ನಮ್ಮ ವಾಹಿನಿಯ ಮುಂದೆ ಹಂಚಿಕೊಂಡರು.

ಹಾಗೂ ಭಾರತ ವೈಭವ ದಿನಪತ್ರಿಕೆ ಹಾಗೂ ಬಿ ವಿ 5 ನ್ಯೂಸ್ ಇದೇ ರೀತಿಯಾಗಿ ಜನರ ಸೇವೆಯನ್ನು ಮಾಡುತ್ತ ಮುಂದೆ ಸಾಗಲಿ ಎಂದು ವಾಹಿನಿಗೆ ಕೂಡ ಶುಭ ಹಾರೈಸಿದರು.ಈ ಅಭಿಷೇಕ ಕಾರ್ಯಕ್ರಮದ ಸಂದರ್ಭದಲ್ಲಿ ಕಾರ್ಯಕ್ರಮದ ಮುಖಂಡರಾದ ಪುಷ್ಪರಾಜ ಮಾನೆ, ಹಾಗೂ ರಾಮಣ್ಣಾ ಮುರಚಿಟ್ಟಿ, ಇವರು ತಮ್ಮ ಅನಿಸಿಕೆಗಳನ್ನು ನಮ್ಮ ವಾಹಿನಿಯ ಮುಂದೆ ಹಂಚಿಕೊಂಡರು.

ಇನ್ನು ಈ ಕಾರ್ಯಕ್ರಮದ ಸಂದರ್ಭದಲ್ಲಿ ಅಶೋಕ್ ಮಾಸ್ತಿಹೋಳಿಮಠ, ಶಿವಾನಂದ ಪಾಟೀಲ, ಅಶೋಕ್ ಬಾಡಕರ, ಚಿದಾನಂದ ನಿರ್ವಾಣಿಮಠ, ಪುಲಿಕೇಶಿ ನಿಂಗನೂರ್, ಶಿವಲಿಂಗಯ್ಯ ಹಿರೇಮಠ, ಶ್ರೀಧರ್ ಜಂಭಗಿ, ಬೀರಣ್ಣಾ, ಇನ್ನು ಪ್ರಕಾಶ್ ಭೂಸಗೋಳ ಅವರ ಕುಟುಂಬಸ್ಥರು ಹಾಗೂ ಎಲ್ಲ ನೂರಾರು ಭಕ್ತರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!