ಚಡಚಣ :– ಸಮೀಪದ ಸುಕ್ಷೇತ್ರ ಏಳಗಿ (ಪಿ ಎಚ್ ) ಗ್ರಾಮದೇವತೆ ಪ್ರತಿ ಮೂರು ವರ್ಷಗಳಿಗೊಮ್ಮೆ ಜಾತ್ರಾ ಮಹೋತ್ಸವ ನಡೆಸೋದು ಇಲ್ಲಿನ ಹಿರಿಯರ ವಾಡಿಕೆ, ಹಿಂದಿನಿಂದಲೂ ಇಲ್ಲಿ ದೇವರಿಗೆ ಹರಕೆ ಹೊತ್ತು ಹರಕೆ ತೀರಿದರೆ ಎಲೆ ಪೂಜೆ ಮಾಡಿಸೋದು ರೂಢಿಯಲ್ಲಿದೆ.
ಎಲೆ ಪೂಜೆ ಮಾಡಬೇಕಾದರೆ ಸುಮಾರು ದಿನಗಳು ದೇವರ ಹೆಸರಿನಲ್ಲಿ ಉಪವಾಸ ವೃತ ಮಾಡಿ, ನಂತರ ದೇವರ ಪಲ್ಲಕ್ಕಿ ಮನೆಯಿಂದ ಪಲ್ಲಕ್ಕಿ ಮತ್ತು ನಂದಿ ಧ್ವಜ ಮತ್ತು ವೃಂದ ವಾದ್ಯ, ಕರಡಿ ಮಜಲು ಸಮೇತ ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಶುಭಾಸಗೌಡ ಬಿರಾದಾರ ಇವರಿಂದ ದೇವಸ್ಥಾನಕ್ಕೆ ಉರುಳು ಸೇವೆ, ದಿಂಡವತ ಹಾಕುತ್ತ ಗ್ರಾಮದ ಮುಖ್ಯ ಬಿದಿಗಳಲ್ಲಿ ಭವ್ಯ ಮೆರವಣಿಗೆ ಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ, ಪೂಜೆ ನೆರವೇರಿಸಿ ನಂತರ ಮತ್ತೆ ಪಲ್ಲಕ್ಕಿ ಮನೆಗೆ ನಂದಿ ಧ್ವಜಜಗಳ ಆಗಮನ ನಂತರ ಸ್ವಾಮೀಜಿಗಳ ಉಪಹಾರ ನಂತರ ಬಂದ ಭಕ್ತಾದಿಗಳ ಪ್ರಸಾದ ಅನ್ನ ದಾಸೋಹ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವೇದ ಮೂರ್ತಿ ಮಡಿವಾಳಯ್ಯ ಹಿರೇಮಠ, ಕಾಶಿ ವೇಷಧಾರಿ ಪುರವಂತರು, ಶುಭಾಸ ಥoಬ, ತಮ್ಮರಾಯ ಬಿರಾದಾರ್, ರಾವಸಾಬ ಬಿರಾದಾರ, ಅಪ್ಪಾಸಾಬ ಬಿರಾದಾರ, ಗಜಾನನ ನಾಗಪುರ್, ಬಸವರಾಜ್ ವಗ್ಗಿ, ಹಾಗೂ ಗ್ರಾಮಸ್ಥರ ಉಪಸ್ಥಿರಿದ್ದರು.
ವರದಿ ಉಮಾಶಂಕರ ಕ್ಷತ್ರಿ