ಅಥಣಿ : ತಾಲೂಕಿನ ಐಗಳಿ ಗ್ರಾಮದ ಶಿವಯೋಗಿ ಶ್ರೀ ಅಪ್ಪಯ್ಯ ಸ್ವಾಮಿಗಳ ಜಾತ್ರಾ ಮಹೋತ್ಸವ ಅತಿ ಸಡಗರ ಸಂಭ್ರದಿಂದ ಜರುಗಿತು. ಮುಂಜಾನೆ ಶ್ರೀಗಳ ಗದ್ದುಗೆ ಪೂಜೆ ಹಾಗೂ ಶ್ರೀ ಬಸಪ್ಪ ಮತ್ತು ಶ್ರೀ ಬನಪ್ಪ ಪೂಜಾರಿ ಗಳಿಂದ ವಿಶೇಷ ಪೂಜೆ ಜರಗಿತು. ಮಧ್ಯಾಹ್ನ ಅನ್ನಪ್ರಸಾದ ಜರುಗಿತು ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು ನಂತರ ಸಂಜೆ ಅದ್ದೂರಿಯಾಗಿ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ರಥೋತ್ಸವ ಸಾಗಿತು ಐಗಳಿ ಗ್ರಾಮದ ಹಾಗೂ ಸುತ್ತಮುತ್ತಲಿನ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು ಐಗಳಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಗಳು ಬಂದು ಬಸ್ತ್ ಕೈಗೊಂಡಿದ್ದರು.




