Ad imageAd image

ಬಸವನಬಾಗೇವಾಡಿಯಲ್ಲಿ ಅದ್ದೂರಿ ಶ್ರೀ ಬಸವೇಶ್ವರ ಜಯಂತಿ

Bharath Vaibhav
ಬಸವನಬಾಗೇವಾಡಿಯಲ್ಲಿ ಅದ್ದೂರಿ  ಶ್ರೀ ಬಸವೇಶ್ವರ ಜಯಂತಿ
WhatsApp Group Join Now
Telegram Group Join Now

ವಿಜಯಪುರ: ಬಸವನ ಬಾಗೇವಾಡಿ ಪಟ್ಟಣದಲ್ಲಿ ಇಂದು ಬಸವೇಶ್ವರ 892 ನೇಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಮುಂಜಾನೆ ವಿರಕ್ತ ಮಠ ಬಸವನ ಬಾಗೇವಾಡಿಯಿಂದ ಶ್ರೀ ಬಸವೇಶ್ವರ ಮೂರ್ತಿಯನ್ನು ಮೆರವಣಿಗೆ ಮೂಲಕ ಶ್ರೀ ಬಸವೇಶ್ವರ ದೇವಾಲಯಕ್ಕೆ ತರಲಾಯಿತು.
ಮೆರವಣಿಗೆಯಲ್ಲಿ ಸುಮಂಗಲೆಯರು ವಚನ ಪುಸ್ತಕವನ್ನು ಮಸ್ತಕದ ಮೇಲೆ ಹೊತ್ತು ಭಾಗವಹಿಸಿದ್ದರು ಊರಿನ ಗಣ್ಯರು ಹಿರಿಯರು ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಬಸವೇಶ್ವರ ದೇವಾಲಯಕ್ಕೆ ಆಗಮಿಸಿ ನಂದಿ ಮೂರ್ತಿಗೆ ಪೂಜೆ ಸಲ್ಲಿಸಿದರು
ಕರ್ಪೂರ ಬೆಳಗಿದರು. ದೇವಾಲಯದ ಆವರಣದಲ್ಲಿ ಪೂಜ್ಯರಾದ ಸಿದ್ದಲಿಂಗ ಮಹಾ ಸ್ವಾಮೀಜಿಯವರು ಎಂಟು ಗಂಟೆಗೆ ಧ್ವಜಾರೋಹಣ ಮಾಡಿದರು.

ಆನಂತರ ಬಸವೇಶ್ವರ ಮೂರ್ತಿಯನ್ನು ಗಾಡಿಯಲ್ಲಿ ಇಟ್ಟುಕೊಂಡು ಊರಿನ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಾ ಬಸವ ಸ್ಮಾರಕಕ್ಕೆ ಆಗಮಿಸಿತು.

ಆನಂತರ ಸಕ್ಕರೆ ಮಾರುಕಟ್ಟೆ ಜವಳಿ ಸಚಿವರಾದ  ಶಿವಾನಂದ್ ಪಾಟೀಲ್ ಅವರು ಮತ್ತು ಪೂಜ್ಯರು ಗುರುಹಿರಿಯರು ಮುತ್ತೈದೆಯರು ಸೇರಿಕೊಂಡು ಬಸವಣ್ಣವರಿಗೆ ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ
ನೆರವೇರಿಸಿದರು.

ಇದೇ ಸಮಯದಲ್ಲಿ ಈರಣ್ಣ ಪಟ್ಟಣಶೆಟ್ಟಿ. ಯಮನಪ್ಪ ಸೋಮನಕಟ್ಟಿ ತಹಸಿಲ್ದಾರರು .  ಶಂಕರಗೌಡ ಬಿರಾದಾರ್  ಬಸವರಾಜ್ ಗೊಳಸಂಗಿ ರವಿ ರಾಠೋಡ್. ವಸಂತ್ ರಾಥೋಡ್ ಕ್ಷೇತ್ರ ಶಿಕ್ಷಣಾಧಿಕಾರಿಗಳು. ಜಗದೇವಿ ಗುಂಡಳ್ಳಿ ಅಧ್ಯಕ್ಷರು ಪುರಸಭೆ.  ಬಸವರಾಜ್ ಸರ್ಕಾರಿ ಅಧಿಕಾರಿಗಳು ಶಿಕ್ಷಕರು ನೂರಾರು ಬಸವ ಭಕ್ತರು ಉಪಸ್ಥಿತರಿದ್ದರು.
ವರದಿ: ಕೃಷ್ಣಾ. H. ರಾಠೋಡ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!