ಚನ್ನಮ್ಮನ ಕಿತ್ತೂರು : ಉತ್ತರ ಕರ್ನಾಟಕ ಭಾಗದ ಪವಿತ್ರ ಸ್ಥಳ ಉಳವಿ ಇಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ನೂರಾರು ಕಿಲೋ ಮೀಟರ್ ದೂರದಿಂದ ಕಾಲ್ನಡಿಗೆ ಮೂಲಕ ಮತ್ತು ಚಕ್ಕಡಿ ಗಾಡಿಯಲ್ಲಿ ಜಾತ್ರೆಗೆ ಬರುವುದು ಇಲ್ಲಿನ ವಿಶೇಷವಾಗಿದೆ. ಭಕ್ತರು ತಾವು ತಂಗುವಷ್ಟುದಿನಕ್ಕೊ ಅಡುಗೆ ವಸ್ತುಗಳನ್ನೆಲ್ಲ ಚಕ್ಕಡಿಯಲ್ಲಿ ತುಂಬಿಕೊಂಡು ಸಾಗುತ್ತಾರೆ ರಾತ್ರಿಯಾಗುತ್ತಿದ್ದಂತೆ ಅಲ್ಲಲ್ಲಿ ಚಕ್ಕಡಿಯನ್ನು ನಿಲ್ಲಿಸಿ ದಾರಿ ಮಧ್ಯದಲ್ಲೇ ವಿಶ್ರಾಂತಿ ಪಡೆಯುತ್ತಾರೆ ಮರುದಿನ ಬೆಳಗ್ಗೆ ಮತ್ತೆ ಪಯಣ ಆರಂಭಿಸುತ್ತಾರೆ ವಿಶ್ರಾಂತಿ ಪಡೆಯುವ ಸಮಯದಲ್ಲಿ ದಿನಕ್ಕಾಗುವಷ್ಟು ಅಡುಗೆ ಸಿದ್ದಪಡಿಸಿಕೊಂಡು ಉಟ ಮಾಡುತ್ತಾ ಸಾಗುತ್ತಾರೆ ಎನ್ನುತ್ತಾರೆ.
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಬಸಾಪುರ ಮತ್ತು ಶೀಗಿಹಳಿ ಕೆ ಎ ಗ್ರಾಮದಿಂದ ಈಗಾಗಲೇ ಉಳವಿಯತ್ತ ಭಕ್ತರ ದಂಡು ಹರಿದು ಬರುತ್ತಿದು. ಪ್ರತಿ ವರ್ಷ ದಂತೆ ಈ ವರ್ಷವೂ ಸಹ ಚನ್ನಮ್ಮನ ಕಿತ್ತೂರಿನ ಬಸಾಪುರ ಮತ್ತು ಶೀಗಿಹಳಿ ಕೆ ಎ ಗ್ರಾಮದ ಭಕ್ತರು ಕಳೆದ ವಾರ 10-15 ಚಕ್ಕಡಿಗಳು ಉಳವಿ ಜಾತ್ರೆಗೆ ಪ್ರಯಾಣ ಬೆಳೆಸಿದ್ದರು.ಮೋದಲ ದಿನ ಕಕ್ಕೇರಿ ಏರಡನೇಯ ದಿನ ದಾಂಡೇಲಿ ಹಾಗೆ ಅಲ್ಲಲ್ಲಿ ಕೆಲವು ದಿನಗಳ ಕಾಲ ಇದ್ದು ಚನ್ನಬಸವೇಶ್ವರರ ದರ್ಶನ ಪಡೆಯಲೂ ಸಾವಿರಾರು ಜನ ತೆರಳಿದ್ದಾರೆ.
ವರದಿ : ಬಸವರಾಜ ಭಿಮರಾಣಿ




