Ad imageAd image

ಶ್ರೀ ಗೋಸಲಾಂಜ ನೇಯನ ಅದ್ಧೂರಿ ಜಾತ್ರೆ…

Bharath Vaibhav
ಶ್ರೀ ಗೋಸಲಾಂಜ ನೇಯನ ಅದ್ಧೂರಿ ಜಾತ್ರೆ…
WhatsApp Group Join Now
Telegram Group Join Now

ಮುದಗಲ್ಲ :-ವೆಂಕಟರಾಯಪೇಟೆಯ ಶ್ರೀ ಗೋಸಲಾಂಜ ನೇಯನ ಜಾತ್ರೋತ್ಸವ ಸೋಮವಾರ ಅದ್ಧೂರಿಯಾಗಿ ನಡೆಯಿತು.ಜಾತ್ರೆ ನಿಮಿತ್ತ ಪುಷ್ಪಾರ್ಚನೆ ಹಾಗೂ ವಿಶೇಷ ಪೂಜಾ ವಿಧಾನಗಳು ಜರುಗಿದವು. ನಂತರ ಅಲಂಕೃತ ವಾಹನದಲ್ಲಿ ಗೋಸಲಾಂಜನೇಯನ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ 125 ಹೆಚ್ಚು ಕುಂಭಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯಲ್ಲಿ ಭಜನೆ, ಡೊಳ್ಳುಕುಣಿತ ಸೇರಿದಂತೆ ಮಹಿಳೆಯರು ಕಳಶ ಹಿಡಿದು ಮೆರವಣಿಗೆಗೆ ಮೆರಗು ತಂದರು.ನಂತರ ಗೋಸಲಾಂಜನೇಯ ದೇಗುಲಕ್ಕೆ ಕಳಸಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು

ಈ ಸಂದರ್ಭದಲ್ಲಿ ಕರಿಯಪ್ಪ ಯಾದವ್, ರಾಮಣ್ಣ ಯಾದವ್ ,ಕನಕಪ್ಪ ಯಾದವ್, ಮಂಜುನಾಥ ಬನ್ನಿಗೋಳಕರ್ ,ನಾಗಪ್ಪ ಯಾದವ್, ಗಂಗಪ್ಪ ಯಾದವ್ ,ಮಂಜುನಾಥ ಬಂಗಾರಗುಂಡು, ಸಂಜುವಪ್ಪ, ಮೌನೇಶ ಶಿವನಗುತ್ತಿ,ಸಮಾಜ ಇತರರು ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!