Ad imageAd image

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ. ಭಕ್ತಾದಿಗಳ ಕಾಣಿಕೆಯ ಮೊತ್ತ ₹ 71.41.325.

Bharath Vaibhav
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ. ಭಕ್ತಾದಿಗಳ ಕಾಣಿಕೆಯ ಮೊತ್ತ ₹ 71.41.325.
WhatsApp Group Join Now
Telegram Group Join Now

ನಾಯಕನಹಟ್ಟಿ: -ಸಂತಾನ ಭಾಗ್ಯ ನೌಕರಿ ಆರ್ಥಿಕ ಆರೋಗ್ಯ ಸಂಪತ್ತು ಕರುಣಿಸುವಂತೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಲಿಖಿತ ಪತ್ರಗಳನ್ನು ಹುಂಡಿಗೆ ಭಕ್ತರು ಹಾಕಿದ್ದರು.

ನಾಯಕನಹಟ್ಟಿ:: ಮೇ.24. ಐತಿಹಾಸಿಕ ನಾಯಕನಹಟ್ಟಿ ಶ್ರೀ ಗುರುತಿಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯವನ್ನು ಶುಕ್ರವಾರ ದೇವಾಲಯದ ಆವರಣದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ರೇಹಾನ್ ಪಾಷ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಾರ್ಯನಿರ್ವಾಣಧಿಕಾರಿ ಎಚ್. ಗಂಗಾಧರಪ್ಪ. ಮತ್ತು ಬ್ಯಾಂಕ್ ಅಧಿಕಾರಿಗಳ ಸಹಯೋಗದಲ್ಲಿ ನಡೆಯಿತು.

ಇದೆ ವೇಳೆ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿದ ಅವರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಲೋಕಸಭಾ ಚುನಾವಣೆ ಇದುದರಿಂದ ಒಂದು ತಿಂಗಳು ಲೇಟಾಗಿ ಹುಂಡಿ ಎಣಿಕೆ ಮಾಡಲಾಗಿದೆ. ಕಳೆದ ವರ್ಷ 72 ಲಕ್ಷ ಸಂಗ್ರಹವಾಗಿತ್ತು ಈ ವರ್ಷವೂ ಸಹ ಹುಂಡಿಯಲ್ಲಿ ಸಂಗ್ರಹವಾದ ಒಟ್ಟು ಹಣವನ್ನು ದೇವಸ್ಥಾನದ ಖಾತೆಗೆ ಜಮಾ ಮಾಡಲಾಗುವುದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಳಸಲಾಗುವುದು ಎಂದರು.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಣಧಿಕಾರಿ ಎಚ್. ಗಂಗಾಧರಪ್ಪ ಮಾತನಾಡಿ ಜಿಲ್ಲಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ಹುಂಡಿ ಎಣಿಕೆ ಸಿದ್ಧಪಡಿಸಿದ್ದು ಈ ವರ್ಷ ವಾರ್ಷಿಕ ಜಾತ್ರೆ ಮಾರ್ಚ್ 26 ರಂದು ನಡೆಯಿತು ಲೋಕಸಭಾ ಚುನಾವಣೆ ಇದ್ದುದರಿಂದ ಒಂದು ತಿಂಗಳು ಲೇಟಾಗಿ ಹುಂಡಿ ಎಣಿಕೆ ಮಾಡಲಾಗಿದೆ.

ಕಳೆದ ವರ್ಷ 72 ಲಕ್ಷ ಆಗಿತ್ತು ಈ ವರ್ಷವೂ ಸಹ 65 ರಿಂದ 70 ಲಕ್ಷ ನಿರೀಕ್ಷೆಯಲ್ಲಿ ಇದ್ದೇವೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಈ ಹಣವನ್ನು ಬಳಸಲಾಗುವುದು ಎಂದರು.

ಮೊದಲು ಹೂರಮಠ ದೇವಾಲಯದಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆಯ ತಹಶೀಲ್ದಾರ್ ರೇಹಾನ್ ಪಾಷ, ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ ನೇತೃತ್ವದಲ್ಲಿ ಬೆಳಿಗ್ಗೆ 10ಕ್ಕೆ ಆರಂಭವಾದ ಎಣಿಕೆ ಕಾರ್ಯ ಮಧ್ಯಾಹ್ನ 1:00ಗೆ ಮುಕ್ತಾಯವಾಯಿತು.

ನಂತರ ಒಳ ಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 7.ಗಂಟೆಗೆ ಮುಕ್ತಾಯವಾಯಿತು.ಹೊರಮಠದಲ್ಲಿ₹ 19. 53.575 ಲಕ್ಷ ಒಳಮಠದಲ್ಲಿ ₹ 51.87.750.ಲಕ್ಷ ಸಂಗ್ರಹ ಹಾಗೂ ಒಟ್ಟಾರೆಯಾಗಿ ನಾಲ್ಕು ತಿಂಗಳ ಅವಧಿಯಲ್ಲಿ ₹ 71.41.325 ಲಕ್ಷ ಸಂಗ್ರಹವಾಗಿದೆ.ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು.ಹೊರಮಠ ಮತ್ತು ಒಳಮಠಗಳ ಹುಂಡಿಯಲ್ಲಿ ಹಲವು ಬೆಳ್ಳಿ ನಾಣ್ಯಗಳು ಬೆಳ್ಳಿ ತೊಟ್ಟಿಲುಗಳು ಬೆಳ್ಳಿ ಆಭರಣಗಳು ಕಂಡು ಬಂದವು.

ಇದೇ ಸಂದರ್ಭದಲ್ಲಿ ಶಿರಸ್ತೇದಾರ್ ಸದಾಶಿವಯ್ಯ ಉಪತಹಶೀಲ್ದಾರ್ ಬಿ. ಶಕುಂತಲಾ, ಕಂದಾಯ ನಿರೀಕ್ಷಕ ಆರ್ ಚೇತನ್ ಕುಮಾರ್, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿಗಳಾದ ಎಸ್ ಸತೀಶ್, ಮನು, ಬಿ ಟಿ.ರುದ್ರೇಶ್, ಶಂಕರ್, ಶಿವಣ್ಣ, ಮಹಾದೇವ, ಗ್ರಾಮಲೆಕ್ಕಧಿಕಾರಿ ಶಂಕರ್, ರವಿ, ಶರಣಬಸಪ್ಪ, ಪ್ರದೀಪ್ ,ಪುಷ್ಪಲತಾ, ಉಮಾ, ಗ್ರಾಮ ಸಹಾಯಕರಾದ ಓಬಣ್ಣ, ಹರೀಶ್, ಚನ್ನಬಸಪ್ಪ, ಹೇಮಂತ್, ಹಾಗೂ ಕೆನರಾ ಬ್ಯಾಂಕ್ ಮೆನೇಜರ್ ರಾಮ್ ಮೋಹನ್, ವಿರುಪಾಕ್ಷಿ,ನಲಗೇತನಹಟ್ಟಿ ಎಂ ಬಿ ಮಹಾಸ್ವಾಮಿ, ಕೆ ಬಿ ಪುರಂದರ, ಇದ್ದರು

ವರದಿ ಪಿಎಂ ಗಂಗಾಧರ

WhatsApp Group Join Now
Telegram Group Join Now
Share This Article
error: Content is protected !!