ಬೆಂಗಳೂರು : ಯಶವಂತಪುರ ಶ್ರೀ ಜನ್ಯ ಫೌಂಡೇಶನ್ ಉದಯವಾಗುತ್ತಿದ್ದು ಈ ಫೌಂಡೇಷನ್ ನಾಡಿನಲ್ಲಿ ಹಲವಾರು ಸಮಾಜ ಮುಖಿಯಾಗಿ ಸೇವೆಯ ನೀಡುವಲ್ಲಿ ಯಶಸ್ವಿಯಾಗಿ ಉತ್ತುಂಗದತ್ತ ಬೆಳೆಯಲಿ ಎಂದು ಭೈರವ ಟ್ರಾವೆಲ್ಸ್ ಮಾಲೀಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಎಂ. ಮಂಜುನಾಥ್ ಹೇಳಿದರು
ಯಶವಂತಪುರ ವಿಧಾನಸಭಾ ಕ್ಷೇತ್ರ ಶಾಸಕ ಎಸ್ ಟಿ ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭೋತ್ಸವ ಶ್ರೀ ಜನ್ಯ ಫೌಂಡೇಶನ್ ತುಮಕೂರು ರಸ್ತೆಯಲ್ಲಿರುವ ವೀರೂಸ್ ಪಾರ್ಟಿ ಹಾಲ್ನಲ್ಲಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಿದ್ದು .ಆರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮನುಷ್ಯ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊಂದಿರಬೇಕು ಹಾಗೆ
ಶ್ರದ್ಧೆ, ಮನಸ್ಸು ಪರಿಶ್ರಮ ಇದ್ದಾಗ ಮಾತ್ರ ಸಂಘ ಸಂಸ್ಥೆಗಳು ಬೆಳೆಯಲ್ಲಿಕ್ಕೆ ಎಂದು ಜನ್ಯ ಫೌಂಡೇಶನ್ ಅಧ್ಯಕ್ಷ ಆರ್.ಸಿದ್ದು ಮತ್ತು ಅವರ ಸಂಘದ ಪದಾಧಿಕಾರಿಗಳಿಗೆ ಎಂ.ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು.
ಈಗಿನ ಪರಿಸ್ಥಿತಿಯಲ್ಲಿ ಸಂಘ ಸಂಸ್ಥೆಗಳು ಕಟ್ಟುವುದು ಸುಲಭದ ಕೆಲಸ ಆದರೆ ಬೆಳೆಸಿ ಉಳಿಸಿ ಕೊಂಡು ಹೋಗುವುದು ಕಷ್ಟದ ಕೆಲಸ ಆದರೆ ಈ ಫೌಂಡೇಷನ್ ಅಧ್ಯಕ್ಷ ಆರ್.ಸಿದ್ದು ಅವರು ಸಂಸ್ಥೆ ಬೆಳೆಸುವ ಮನೋಭಾವ ಅವರಲ್ಲಿದೆ ನಿಮ್ಮ ಜೊತೆಗೆ ನಾವು ಇದ್ದೇವೆ ನಮ್ಮ ಸಹಕಾರ ಮಾರ್ಗದರ್ಶನ ಪ್ರೋತ್ಸಾಹ ಸದಾ ಇರಲಿದೆ ಎಂದು ಹೇರೋಹಳ್ಳಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ನಾಗರಾಜ್ ಅಂದ್ರಹಳ್ಳಿ ಅವರು ಭರವಸೆ ನೀಡಿದರು.
ದೊಡ್ಡ ಬಿದರಿಕಲ್ಲ್ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಲಿಖಿತ್ ಗೌಡ್ರು ಮಾತನಾಡಿ ಶ್ರೀಜನ್ಯ ಫೌಂಡೇಷನ್ ನಾಡಿನ ಹಾಗೂ ದೇಶದಲ್ಲಿರುವ ಬಡವರ, ದೀನದಲಿತರ, ಕೂಲಿ ಕಾರ್ಮಿಕರ ಮತ್ತು ನಿರ್ಗತಿಕ ಏಳಿಗೆಗಾಗಿ ಶ್ರಮಿಸಬೇಕು ಅವರು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೇಶವಮೂರ್ತಿ ,ಗೋವಿಂದಪ್ಪ, ಪ್ರಶಾಂತ್ ಕುಮಾರ್, ಧನಂಜಯ್, ಮಂಜುನಾಥ್, ಕಿರಣ್ ಕುಮಾರ್, ರಂಗಭೂಮಿ ನಿರ್ದೇಶಕ ಮುನಿರಾಜು, ಕನಕ ಇಂಜಿನಿಯರಿಂಗ್ ಮಾಲೀಕ ಲತಾ ಸಿದ್ದನಂಜಯ್ಯ,ಸಂಘದ ಮಹಿಳಾ ಮುಖ್ಯಸ್ಥೆ ಶ್ರೀಮತಿ ರಮ್ಯ, ನಾಗರತ್ನ ನೆಲಮಂಗಲ ಸೇರಿದಂತೆ ಫೌಂಡೇಷನ್ ಪದಾಧಿಕಾರಿಗಳು ಸದಸ್ಯರು ಮುಂತಾದವರು ಇದ್ದರು.
ವರದಿ:ಅಯ್ಯಣ್ಣ ಮಾಸ್ಟರ್