Ad imageAd image

ನೆಲಗದರನಹಳ್ಳಿಯಲ್ಲಿ ಮಾಜಿ ಉಪ ಮೇಯರ್ ಸ್ವಗ್ರಹದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Bharath Vaibhav
ನೆಲಗದರನಹಳ್ಳಿಯಲ್ಲಿ ಮಾಜಿ ಉಪ ಮೇಯರ್ ಸ್ವಗ್ರಹದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
WhatsApp Group Join Now
Telegram Group Join Now

ಬೆಂಗಳೂರು: ಪೀಣ್ಯ ದಾಸರಹಳ್ಳಿ ಕ್ಷೇತ್ರದ ನೆಲಗದರನ ಹಳ್ಳಿಯಲ್ಲಿ ಇರುವ ರಾಜಗೋಪಾಲನಗರ ವಾರ್ಡಿನ ಮಾಜಿ ಪಾಲಿಕೆ ಸದಸ್ಯೆ ಹಾಗೂ ಮಾಜಿ ಉಪ ಮೇಯರ್ ಶ್ರೀಮತಿ ಪದ್ಮಾವತಿ ನರಸಿಂಹಮೂರ್ತಿ ಹಾಗೂ ಕ್ಷೇತ್ರದ ಜೆಡಿಎಸ್ ಪ್ರಭಾವಿ ಮುಖಂಡ ನರಸಿಂಹಮೂರ್ತಿ (ಸಿಂಹ) ಇವರ ಸ್ವಗ್ರಹದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮತ್ತು ನರಸಿಂಹಮೂರ್ತಿ ಅವರ ಹಿರಿಯ ಸಹೋದರ ಹಾಗೂ ಮಾಜಿ ನಗರಸಭಾ ಮಾಜಿ ಸದಸ್ಯ ಗೋಪಾಲಕೃಷ್ಣ ಅವರ ಹುಟ್ಟು ಹಬ್ಬದ ಸಂಭ್ರಮ ಆಚರಿಸಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ದೇವರ ಮನೆಯನ್ನು ತಳಿರು ತೋರಣ ಹೂವಿನಿಂದ ಅಲಂಕರಿಸಿ ಕೃಷ್ಣನ ವಿಗ್ರಹ ಸ್ಥಾಪಿಸಿ ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳಿಂದ ಪೂಜಾ ಪುನಸ್ಕಾರ ಮೂಲಕ ಕೃಷ್ಣನ ಭಜನೆ ಕೀರ್ತನೆ ಆರಾಧನೆ ಗಳು ಜರುಗಿದವು ಸಾರ್ವಜನಿಕರು ಕೃಷ್ಣನ ದರ್ಶನ ಪಡೆದು ಪ್ರೀತಿಯ ಭೋಜನ ಸ್ವೀಕರಿಸಿದರು. ನಂತರ ಮಾಜಿ ನಗರಸಭಾ ಸದಸ್ಯ ಹಾಗೂ ಜೆಡಿಎಸ್ ಹಿರಿಯ ರಾಜಕಾರಣಿ ಗೋಪಾಲ ಕೃಷ್ಣ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಶಿವಣ್ಣ ರಾಮಯ್ಯ ಬಡಾವಣೆ, ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಂಗಳ ವಾಟರ್, ಕೈಗಾರಿಕಾ ಉದ್ಯಮಿ ಹಾಗೂ ಬಿಜೆಪಿ ಮುಖಂಡ ದಿನೇಶ್, ಕಂಪ್ಯೂಟರ್ ವಿಜಯಕುಮಾರ್, ನರಸಿಂಹಮೂರ್ತಿ (ಸಿಂಹ), ಗೋಪಾಲ ಕೃಷ್ಣ ಅವರ ಕುಟುಂಬದ ಸದಸ್ಯರು ಸೇರಿದಂತೆ ಮುಂತಾದವರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!